-->
1000938341
15 ವರ್ಷ ಪ್ರಾಯದ ಪತ್ನಿ ಜೊತೆಗಿನ ಲೈಂಗಿಕ ಸಂಪರ್ಕ ಅತ್ಯಾಚಾರವಲ್ಲ- ದೆಹಲಿ ಹೈಕೋರ್ಟ್ ತೀರ್ಪು

15 ವರ್ಷ ಪ್ರಾಯದ ಪತ್ನಿ ಜೊತೆಗಿನ ಲೈಂಗಿಕ ಸಂಪರ್ಕ ಅತ್ಯಾಚಾರವಲ್ಲ- ದೆಹಲಿ ಹೈಕೋರ್ಟ್ ತೀರ್ಪು


ನವದೆಹಲಿ: 15 ವರ್ಷ ವಯಸ್ಸಿನ ಹೆಂಡತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿ ಪತಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ಪತ್ನಿಯೊಂದಿಗಿನ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದಿರುವ ನ್ಯಾಯಾಲಯ, ಈ ಕುರಿತ ದೆಹಲಿ ಪೊಲೀಸರ ಮೇಲ್ಮನವಿಯನ್ನು ತಳ್ಳಿಹಾಕಿದೆ.

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಆಕೆ ಗರ್ಭಿಣಿಯಾಗಿರುವುದನ್ನು ಆರೋಪಿಸಿ ಬಾಲಕಿ ತಾಯಿ 2015ರಲ್ಲಿ ನೀಡಿದ್ದ ದೂರಿನ ಆಧಾರದ ಮೇಲೆ ಮುಸ್ಲಿಂ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಾಗಿತ್ತು.

2014ರ ಡಿಸೆಂಬರ್ ನಲ್ಲಿ ಆರೋಪಿಯನ್ನು ವಿವಾಹವಾಗಿ ದ್ದಾಗಿಯೂ, ನಂತರವೇ ದೈಹಿಕ ಸಂಬಂಧವನ್ನು ಹೊಂದಿದ್ದಾಗಿಯೂ ಬಾಲಕಿ ಕೋರ್ಟ್‌ಗೆ ಸಲ್ಲಿಸಿದ್ದಳು. ಇದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ, ಎರಡನೇ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮುಸ್ಲಿಂ ವ್ಯಕ್ತಿ ತಪ್ಪಿತಸ್ಥನಲ್ಲ. ನ್ಯಾಯಬದ್ಧವಾಗಿಯೇ ಆರೋಪಿ ಖುಲಾಸೆಯಾಗಿರುವುದಾಗಿ ಘೋಷಿಸಿತ್ತು. ಸಾಕ್ಷ್ಯ ವಿಚಾರಣಾ ನ್ಯಾಯಾಲಯದ ಈ ತೀರ್ಪನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುರೇಶ್ ಕುಮಾ‌ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರ ಪೀಠ ಎತ್ತಿಹಿಡಿದಿದೆ. ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

“ಆರೋಪಿಯ ಪತ್ನಿಯಾಗಿರುವ ಬಾಲಕಿಯು ಹದಿನೈದು ವರ್ಷ ವಯಸ್ಸಿನವಳಾಗಿದ್ದಾಳೆ. ಅವರಿಬ್ಬರ ನಡುವಿನ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ' ಎಂದು ಪೀಠ ಹೇಳಿದೆ.

ಐಪಿಸಿಯ ಸೆಕ್ಷನ್ 375 (ಅತ್ಯಾಚಾರ)ನಲ್ಲಿ ನೀಡಲಾದ ವಿನಾಯಿತಿ ಪ್ರಕಾರ, ವ್ಯಕ್ತಿಯು 15 ವರ್ಷಕ್ಕಿಂತ ಕಡಿಮೆಯಿಲ್ಲದ ತನ್ನ ಪತ್ನಿಯೊಂದಿಗೆ ಸಂಭೋಗ ಅಥವಾ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರವಲ್ಲ ಎಂದು ವಿವರಿಸಲಾಗಿದೆ.

Ads on article

Advertise in articles 1

advertising articles 2

Advertise under the article