-->
1000938341
ತನ್ನ ಸಾವಿಗೆ ಪತಿ ಮತ್ತು ಆಕೆ ಕಾರಣ: ಡೆತ್ ನೋಟ್ ಬರೆದಿಟ್ಟು ಯುವತಿ ಸಾವಿಗೆ ಶರಣು

ತನ್ನ ಸಾವಿಗೆ ಪತಿ ಮತ್ತು ಆಕೆ ಕಾರಣ: ಡೆತ್ ನೋಟ್ ಬರೆದಿಟ್ಟು ಯುವತಿ ಸಾವಿಗೆ ಶರಣು


ಬೆಂಗಳೂರು: ತನ್ನ ಸಾವಿಗೆ ಪತಿ ಹಾಗೂ ಆತನ ಪ್ರೇಯಸಿಯೇ ಕಾರಣರು ಎಂದು ಡೆತ್ ನೋಟ್ ಬರೆದಿಟ್ಟು ಯುವತಿಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಹೆಗ್ಗನಹಳ್ಳಿ ನಿವಾಸಿ ಪವಿತ್ರಾ ಮೃತಪಟ್ಟ ಮಹಿಳೆ.

ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪವಿತ್ರಾ ಡೆತ್ ನೋಟ್ ಬರೆದಿಟ್ಟು, ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ. ಪವಿತ್ರಾ ಮೊದಲ ಪತಿಗೆ ವಿಚ್ಛೇದನ ನೀಡಿ, ಚೇತನ್ ಗೌಡನನ್ನು ಎರಡನೇ ಮದುವೆಯಾಗಿದ್ದಳು. ಚೇತನ್ ಗೌಡ ಉದ್ಯಮಿಯಾಗಿದ್ದು, ಪವಿತ್ರಾ ಚೇತನ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಚೇತನ್ ಗೌಡ ಮತ್ತೊಬ್ಬ ಯುವತಿ ಪೂಜಾ ಗೌಡ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡ ವಿಚಾರವಾಗಿ ಪತಿ - ಪತ್ನಿ ಮಧ್ಯೆ ಜಗಳ ನಡೆದಿತ್ತು. ಈ ಬಗ್ಗೆ ಪವಿತ್ರ ತನ್ನ ತಾಯಿ ಪದ್ಮಮ್ಮನವರ ಬಳಿಯೂ ತಿಳಿಸಿದ್ದಳು. ಇದೀಗ ಮನನೊಂದು ಡೆತ್ ನೋಟ್ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ.

ನನ್ನ ಸಾವಿಗೆ ಪತಿ ಚೇತನ್ ಗೌಡ ಹಾಗೂ ಪೂಜಾ ಗೌಡ ಕಾರಣ. 2019ರ ಮೇ 26ರಂದು ಚೇತನ್ ಗೌಡನೊಂದಿಗೆ ನನ್ನ ಮದುವೆಯಾಗಿತ್ತು. ಆದರೆ ಇದೀಗ ಚೇತನ್ ಗೌಡನು ಪೂಜಾ ಗೌಡ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಅ ಬಳಿಕ ನನಗೆ ಸಾಕಷ್ಟು ಕಿರುಳುಕುಳ ಕೊಟ್ಟಿದ್ದು ತಾನು ಸಾಕಷ್ಟು ಕಷ್ಟ ಅನುಭವಿಸಿದ್ದೇನೆ.

ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ನನಗೆ ನ್ಯಾಯ ದೊರಕಬೇಕು. ಚೇತನ್ ಗೌಡನಿಗಾಗಿ ನನ್ನ ಅರ್ಧ ಜೀವನ ಮುಡುಪಾಗಿಟ್ಟಿದ್ದೆ. ಆದರೆ ಪೂಜಾ ಗೌಡ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ನನಗೆ ಚಿತ್ರಹಿಂಸೆ ಕೊಟ್ಟು ನನ್ನ ಸಾವಿಗೆ ಕಾರಣರಾಗಿದ್ದಾನೆ. ಆದ್ದರಿಂದ ಅವರಿಬ್ಬರಿಗೂ ಶಿಕ್ಷೆಯಾಗಬೇಕೆಂದು ಡೆತ್‌ನೋಟ್‌ನಲ್ಲಿ ಬರೆದು ಒತ್ತಾಯಿಸಿದ್ದಾರೆ.

ಮಗಳ ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ನೋಡಿ ತಾಯಿ ಪದ್ಮಮ್ಮ ಪುತ್ರಿಯ ಮನೆ ಬಳಿ ಬಂದಾಗ ಆಕೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸದ್ಯ ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಗರ್ಲ್ ಫ್ರೆಂಡ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article