Mangalore- ನೀರು ತುಂಬಿದ್ದ ಬಕೆಟ್ ಗೆ ಬಿದ್ದು 20 ತಿಂಗಳ‌ ಮಗು ಸಾವು



 ಮಂಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು 20 ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ಮಂಗಳೂರಿನ ಕಾವೂರು ಎಂಬಲ್ಲಿ ನಡೆದಿದೆ.

ಮೂಲತಃ ಜಾರ್ಖಂಡ್ ನಿವಾಸಿ ಸದ್ಯ ಕಾವೂರು ಮಸೀದಿ ಬಳಿ ವಾಸವಿರುವ ಫಿರೋಝ್ ಅನ್ಸಾರಿ ಮತ್ತು ಕಿತಾಬುನ್ ದಂಪತಿಯ ಪುತ್ರಿ ಆಯಿಶಾ ಮೃತಪಟ್ಟ ಮಗು.

  



ಬುಧವಾರ ಸಂಜೆ ಮನೆಯಲ್ಲಿ ಅರ್ಧ ನೀರು ತುಂಬಿಸಿಟ್ಟಿದ್ದ ಬಕೆಟ್ ಬಳಿ ಮಗು ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಈ ವೇಳೆ ಮಗು ಬಕೆಟ್ ಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ.

ಘಟನೆ ಸಂಬಂಧ ಕಾವೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu