
ಸೆಂಟ್ರಲ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಹುದ್ದೆಗಳು: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ಸೆಂಟ್ರಲ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಹುದ್ದೆಗಳು: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ದೇಶದ ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಂದು ಸಾವಿ ಮ್ಯಾನೇಜರ್‌ಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 17ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವೇತನ: ಪ್ರತಿ ತಿಂಗಳು ಕನಿಷ್ಟ ರೂ. 48170/- ರಿಂದ ಗರಿಷ್ಟ ರೂ. 69810/-
ಮಿಡಲ್ ಮ್ಯಾನೇಜ್‌ಮೆಂಟ್ ಸ್ಕೇಲ್ II ವ್ಯವಸ್ಥಾಪಕರ ಹುದ್ದೆಗೆ ನೇಮಕಾತಿ ನಡೆಯಲಿದೆ.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 225 ಸ್ಥಾನಗಳು ಮೀಸಲಾಗಿಡಲಾಗಿದೆ. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 270 ಸ್ಥಾನಗಳು ಮೀಸಲಾಗಿಡಲಾಗಿದೆ.
ರಾಷ್ಟ್ರೀಕೃತ ಯಾ ಖಾಸಗಿ ಬ್ಯಾಂಕ್‌ಗಳಲ್ಲಿ ಗ್ರಾಮೀಣ ಅಧಿಕಾರಿಯಾಗಿ ಕನಿಷ್ಟ ಮೂರು ವರ್ಷದ ಅನುಭವ ಇದ್ದವರಿಗೆ ಆದ್ಯತೆ. ಆರ್‌ಆರ್‌ಬಿ ಯಾ ಇತರ ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಎಂಟು ವರ್ಷ ಬ್ಯಾಂಕಿಂಗ್ ಸೇವೆ ಸಲ್ಲಿಸಿದವರಿಗೆ ಆದ್ಯತೆ.
ವಯೋಮಿತಿ 32 ವರ್ಷ ಮೀರಿರಬಾರದು. ಅರ್ಜಿ ಶುಲ್ಕದ ಸಹಿತ ಎಲ್ಲ ಹೆಚ್ಚಿನ ಮಾಹಿತಿಗಳಿಗೆ ಈ ಕೆಳಗಿನ ವೆಬ್‌ಸೈಟ್ ಲಿಂಕ್‌ನ್ನು ಬಳಸಬಹುದು.
www.centralbankofindia.co.in
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಕೊಂಡಿ ಬಳಸಿ
https://ibpsonline.ibps.in/cbimmjun23/