-->

ಆರತಿ ಮುಟ್ಟಿದ ಪರಿಶಿಷ್ಟ ಶಿಕ್ಷಕನ ಮೇಲೆ ಹಲ್ಲೆ: ಆರೋಪಿಗಳಿಗೆ ಶೋಧ!

ಆರತಿ ಮುಟ್ಟಿದ ಪರಿಶಿಷ್ಟ ಶಿಕ್ಷಕನ ಮೇಲೆ ಹಲ್ಲೆ: ಆರೋಪಿಗಳಿಗೆ ಶೋಧ!

ಆರತಿ ಮುಟ್ಟಿದ ಪರಿಶಿಷ್ಟ ಶಿಕ್ಷಕನ ಮೇಲೆ ಹಲ್ಲೆ: ಆರೋಪಿಗಳಿಗೆ ಶೋಧ!





ದೇವಸ್ಥಾನದಲ್ಲಿ ದೇವರ ಆರತಿಯನ್ನು ಮುಟ್ಟಿದ ಪರಿಶಿಷ್ಟ ಶಿಕ್ಷಕನ ಮೇಲೆ ಹಲ್ಲೆ ನಡೆದ ಘಟನೆ ಕರ್ನಾಟಕದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಶಿಕ್ಷಕರು ದೂರು ನೀಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.



ಈ ಘಟನೆ ನಡೆದಿರುವುದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೇಮಾಪುರ ಗ್ರಾಮ ದೇವತೆಯ ಉತ್ಸವದಲ್ಲಿ. ದೇವರ ಆರತಿಯನ್ನು ಪರಿಶಿಷ್ಟ ಸಮುದಾಯದ ಶಿಕ್ಷಕರೊಬ್ಬರು ಮುಟ್ಟಿದರು ಎಂಬ ಕಾರಣಕ್ಕೆ ಒಕ್ಕಲಿಗ ಸಮುದಾಯದವರು ಮನಬಂದಂತೆ ಥಳಿಸಿ ಕೊಲೆ ಬೆದರಿಕೆಯನ್ನೂ ಹಾಕಿದ್ಧಾರೆ.



ಈ ಬಗ್ಗೆ ಪರಿಶಿಷ್ಟ ಶಿಕ್ಷಕರಾದ ಮಂಜುನಾಥ್ ಅವರು ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ಮಾಡಿ ಬೆದರಿಕೆ ಹಾಕಿದ ಒಕ್ಕಲಿಗ ನಾಯಕರು ಪರಾರಿಯಾಗಿದ್ದಾರೆ.



ಗ್ರಾಮದೇವತೆ ಹಬ್ಬದ ಅಂಗವಾಗಿ ಸಂಜೆ ದೇವಸ್ಥಾನಕ್ಕೆ ಒಕ್ಕಲಿಗ ಸಮುದಾಯದವರು ಆರತಿ ತರುತ್ತಿದ್ದರು. ಆಗ ಆಕಸ್ಮಿಕವಾಗಿ ಈ ಆರತಿ ದೀಪವು ಮಂಜುನಾಥ್ ಅವರಿಗೆ ತಾಗಿತು. ತಕ್ಷಣ ಸ್ಥಳೀಯ ಕೆಲವರು ಆರತಿ ಮುಟ್ಟಿ ಮೈಲಿಗೆ ಮಾಡಿದ ಎಂದು ಅವರ ಮೇಲೆ ಹಲ್ಲೆ ನಡೆಸಿದರು.



ದೇವಿಗೆ ಬಲಿ ಕೊಡಲು ಕೋಣ ತಂದಿದ್ದೇವೆ. ಯಾರಾದರೂ ಅಡ್ಡ ಬಂದರೆ ಅವರ ತಲೆಯನ್ನೂ ಕಡಿಯುತ್ತೇವೆ ಎಂದು ಕೊಲೆ ಬೆದರಿಕೆಯನ್ನೂ ಹಾಕಿದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಂಜುನಾಥ್ ತಿಳಿಸಿದ್ದಾರೆ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article