ಮಂಗಳೂರು: ಕರಿಮಣಿ ಕಳವು ಪ್ರಕರಣ - 23 ವರ್ಷದ ಬಳಿಕ ಆರೋಪಿ ಬಂಧನ


 ಮಂಗಳೂರು: ಮಹಿಳೆಯೊಬ್ಬರ ಕರಿಮಣಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
 
 2000  ನೇ ಇಸವಿ ಡಿಸೆಂಬರ್ 17ರಂದು  ರಾತ್ರಿ  8:45  ಗಂಟೆಗೆ  ಮಹಿಳೆಯನ್ನು ಅಡ್ಡಗಟ್ಟಿ ಆರೋಪಿಗಳು ಚೂರಿ  ತೋರಿಸಿ  ಕುತ್ತಿಗೆಯಲ್ಲಿದ್ದ  ಕರಿಮಣಿ  ಸರವನ್ನು ಕಸಿದು  ಸುಲಿಗೆ ಮಾಡಿಗಿದ್ದರು. ಈ  ಪ್ರಕರಣಕ್ಕೆ  ಸಂಬಂದಿಸಿದಂತೆ  ಉರ್ವಾ   ಪೊಲೀಸ್  ಠಾಣೆಯಲ್ಲಿ  ಠಾಣೆಯಲ್ಲಿ  ಪ್ರಕರಣ  ದಾಖಲಾಗಿತ್ತು.

          ಈ  ಪ್ರಕರಣದಲ್ಲಿ  ಹುಸೇನ್  ಯಾನೆ  ಮೊಹಮ್ಮದ್  ಹುಸೇನ್,   ಬಶೀರ್  ಮತ್ತು  ಮೊಯ್ದೀನ್  ಕುದ್ರೋಳಿ  ಎಂಬವರುಗಳಿದ್ದು  ಹುಸೇನ್  ಯಾನೆ  ಮೊಹಮ್ಮದ್  ಹುಸೇನ್  ಮತ್ತು ಮೊಯ್ದೀನ್  ಕುದ್ರೋಳಿ   ಎಂಬವರನ್ನು  ಆ ಸಂದರ್ಭದಲ್ಲಿ ಬ ಬಂಧಿಸಲಾಗಿತ್ತು  . ಆದರೆ ಆರೋಪಿ  ಬಶೀರ್   ಎಂಬಾತನು  ತಲೆ  ಮರೆಸಿಕೊಂಡಿದ್ದನು.  
          
ಈತನ  ವಿರುದ್ದ  ನ್ಯಾಯಾಲಯವು  ಉದ್ಘೋಷಣೆಯನ್ನು  ಹೊರಡಿಸಿತ್ತು.  ಆದರೆ ಆರೋಪಿಯು  ನ್ಯಾಯಾಲಯಕ್ಕೂ  ಹಾಜರಾಗದೇ  ತಲೆಮರೆಸಿಕೊಂಡಿದ್ದನು.    ಆರೋಪಿಯನ್ನು ಜು.26 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu