-->
1000938341
ಎಸ್ಎಸ್ಎಲ್ ಸಿ ಪುತ್ರ ಜಸ್ಟ್ ಪಾಸ್: ಸಂಭ್ರಮಿಸಿದ ಪಾಲಕರು, ನೆಟ್ಟಿಗರಿಂದ ಪ್ರಶಂಸೆ

ಎಸ್ಎಸ್ಎಲ್ ಸಿ ಪುತ್ರ ಜಸ್ಟ್ ಪಾಸ್: ಸಂಭ್ರಮಿಸಿದ ಪಾಲಕರು, ನೆಟ್ಟಿಗರಿಂದ ಪ್ರಶಂಸೆ


ನವದೆಹಲಿ: ವಿದ್ಯಾರ್ಥಿಗಳ ಯಶಸ್ಸು ಅಂಕಗಳ ಆಧಾರದ ಮೇಲೆಯೇ ಅಳೆಯಲಾಗುತ್ತದೆ. ಪರೀಕ್ಷೆಗಳಲ್ಲಿ ಮಕ್ಕಳು ಅಧಿಕ ಅಂಕ ಗಳಿಸಬೇಕೆಂದು ಪಾಲಕರು ಒತ್ತಡ ಹೇರುತ್ತಾರೆ. ಈ ರೀತಿಯ ಒತ್ತಡದಿಂದ ಕೆಲ ಮಕ್ಕಳು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಇದೆ. ಆದರೆ ಅಂಕ ಕಡಿಮೆಯಾಯ್ತೆಂದು ಖೇದ ವ್ಯಕ್ತಪಡಿಸುವವರ ನಡುವೆ ಇಲ್ಲೊಂದು ಕುಟುಂಬ ತಮ್ಮ ಮಗ ಜಸ್ಟ್ ಪಾಸ್ ಆದರೂ ಸಂಭ್ರಮಿಸುವ ಮೂಲಕ ಇತರರಿಗೆ ಮಾದರಿಯಾಗಿದೆ.

ಮುಂಬೈ ಮೂಲದ ಕುಟುಂಬವೊಂದು ಅಂಕಗಳ ಆಧಾರದ ಯಶಸ್ಸಿನ ಮಾನದಂಡಕ್ಕೆ ಕೊನೆಯಾಡಿದ್ದಾರೆ. ಇವರ ಪುತ್ರ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ಕೇವಲ ಶೇ. 35 ಅಂಕಗಳಿಸಿದ್ದಾನೆ. ಆದರೆ ಆತನನ್ನು ನಿಂದಿಸದೇ ಅಥವಾ ಕೋಪಗೊಳ್ಳದೆ ಪುತ್ರನ ಸಣ್ಣ ಯಶಸ್ಸನ್ನೂ ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮುಂಬೈನ 10ನೇ ತರಗತಿ ವಿದ್ಯಾರ್ಥಿ ಪರೀಕ್ಷೆಯಲ್ಲಿ ಶೇ.35 ಅಂಕ ಪಡೆದಿದ್ದಾನೆ. ಆದರೆ ಆತನ ಮೇಲೆ ದುಃಖ ಅಥವಾ ಕೋಪಗೊಳ್ಳುವ ಬದಲು, ಹೆತ್ತವರು ಅವನ ಯಶಸ್ಸನ್ನು ಸಂಭ್ರಮಿಸಿದ್ದಾರೆ ಎಂದು ಅವನೀಶ್ ಶರಣ್ ವಿಡಿಯೋ ಕುರಿತು ಬರೆದುಕೊಂಡಿದ್ದಾರೆ. ಮೊಬೈಲ್ ಡಿಸ್‌ಪ್ಲೇನಲ್ಲಿ 35 ಎಂದು ಬರೆದಿರುವುದನ್ನು ವಿದ್ಯಾರ್ಥಿ ಮತ್ತು ಪಾಲಕರು ನಗುಮುಖದಿಂದ ಕ್ಯಾಮೆರಾ ಮುಂದೆ ಪ್ರದರ್ಶಿಸಿ, ಥಂಬ್ಸ್ ಅಪ್ ಮಾಡಿ ಸಂಭ್ರಮಿಸಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಇದಕ್ಕೆ ಮೆಚ್ಚುಗೆ ಮಹಾಪೂರವೇ ಹರಿದುಬಂದಿದೆ. ಇಂತಹ ಪಾಲಕರನ್ನು ಪಡೆದ ಆ ಬಾಲಕನೇ ಅದೃಷ್ಟವಂತ.‌ ಪ್ರತಿ ವಿದ್ಯಾರ್ಥಿಗಳಿಗೂ ಇಂತಹ ಪಾಲಕರಿರಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ನಡೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಅಂಕಗಳನ್ನು ಪಡೆಯಲು ಒತ್ತಡ ಹೇರಬಾರದು. ಅವರು ಧನಾತ್ಮಕವಾಗಿ ಉಳಿಯಬೇಕು. ಪೋಷಕರ ಒತ್ತಡವು ಮಕ್ಕಳನ್ನು ಆತಂಕಕ್ಕೆ ಗುರಿಯಾಗುವಂತೆ ಮಾಡುತ್ತದೆ. ಅವರು ಅಸುರಕ್ಷಿತರಾಗುತ್ತಾರೆ ಮತ್ತು ತಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ಅನುಮಾನಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article