-->
1000938341
ಪ್ರತಾಪ್ ಸಿಂಹಗೆ ಒಕ್ಕೂಟ ವ್ಯವಸ್ಥೆ ಗೊತ್ತಿಲ್ಲ: ಸಂಸದನ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ

ಪ್ರತಾಪ್ ಸಿಂಹಗೆ ಒಕ್ಕೂಟ ವ್ಯವಸ್ಥೆ ಗೊತ್ತಿಲ್ಲ: ಸಂಸದನ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ

ಪ್ರತಾಪ್ ಸಿಂಹಗೆ ಒಕ್ಕೂಟ ವ್ಯವಸ್ಥೆ ಗೊತ್ತಿಲ್ಲ: ಸಂಸದನ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ

ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯ ಮೈಸೂರು ಸಂಸದ ಪ್ರತಾಪ್ ಸಂಸದ ಪ್ರತಾಪ್ ಸಿಂಹ ಅವರಿಗೆ ದೇಶದ ಒಕ್ಕೂಟ ವ್ಯವಸ್ಥೆಯ ಅರಿವು ಇಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಜಾಡಿಸಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರವನ್ನು ಅಕ್ಕಿ ಕೇಳುವಂತಿಲ್ಲ ಎಂದು ಪ್ರತಾಪ ಸಿಂಹ ಹೇಳುತ್ತಾರೆ. ಹಾಗಾದರೆ, ನಾವು ಕೇಂದ್ರ ಸರ್ಕಾರಕ್ಕೆ ತೆರಿಗೆಯನ್ನು ಏಕೆ ಕಟ್ಟಬೇಕು ಎಂದು ಹೇಳಲಿ ಎಂದು ಸವಾಲು ಹಾಕಿದರು.ಹಾಗಾದರೆ ಸಂಸದರಾಗಿ ನೀವು ಗೆದ್ದಿರುವುದು ಏಕೆ..? ರಾಜ್ಯ ಸರ್ಕಾರದ ಪಾಲನ್ನು ಇವರು ತರಬೇಕು ಅಲ್ಲವೇ..? ರಾಜ್ಯದ ಸಂಸದರು ಇಲ್ಲಿನ ಜನತೆಯ ಪರವಾಗಿ ಮಾತನಾಡಬೇಕು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.ಕೇಂದ್ರ ಸರ್ಕಾರವನ್ನು ಧರ್ಮಾರ್ಥ ಅಕ್ಕಿ ಕೊಡಿ ಎಂದು ಕೇಳಿಲ್ಲ. ಅವರು ಕೊಡುವ ಅಕ್ಕಿಗೆ ಹಣ ನೀಡಲಾಗುತ್ತದೆ. ಈ ಹಣವನ್ನು ಕೊಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿಯಲ್ಲಿ ರಾಜಕೀಯ ಮಾಡುತ್ತಿದೆ ಎಂದು ಅವರು ಹೇಳಿದರು.ಕಾಂಗ್ರೆಸ್‌ಗೆ ಖ್ಯಾತಿ ಬರುತ್ತದೆ, ಬಡವರು ಅಕ್ಕಿಯ ಪ್ರಯೋಜನ ಪಡೆಯುತ್ತಾರೆ ಎಂಬ ಕಾರಣಕ್ಕೆ ಕೇಂದ್ರ ಈ ರೀತಿಯ ಧೋರಣೆ ಅನುಸರಿಸುತ್ತಿದೆ. ಇದು ನಿಜಕ್ಕೂ ದುರದೃಷ್ಟಕರ ಎಂದು ಅವರು ಬಣ್ಣಿಸಿದರು.

.

Ads on article

Advertise in articles 1

advertising articles 2

Advertise under the article