-->
1000938341
ಸಿಟ್ಟಿನ ಭರದಲ್ಲಿ ಅಜ್ಜಿಯನ್ನು ತಳ್ಳಿ ಕೊಲೆಗೈದ ಮೊಮ್ಮಗ: ಕಾರಿನಲ್ಲಿ ಮೃತದೇಹವಿಟ್ಟು ನಾಪತ್ತೆ ದೂರು, ಶವ ಸುಟ್ಟು ಹಾಕಿದ ಹಂತಕ ಸಿಕ್ಕಿಬಿದ್ದದ್ದೇ ರೋಚಕ

ಸಿಟ್ಟಿನ ಭರದಲ್ಲಿ ಅಜ್ಜಿಯನ್ನು ತಳ್ಳಿ ಕೊಲೆಗೈದ ಮೊಮ್ಮಗ: ಕಾರಿನಲ್ಲಿ ಮೃತದೇಹವಿಟ್ಟು ನಾಪತ್ತೆ ದೂರು, ಶವ ಸುಟ್ಟು ಹಾಕಿದ ಹಂತಕ ಸಿಕ್ಕಿಬಿದ್ದದ್ದೇ ರೋಚಕ


ಮೈಸೂರು: ಸಿಟ್ಟಿನ ಭರದಲ್ಲಿ ಬಿಸಿಎ ವಿದ್ಯಾರ್ಥಿ  ಮಾಡಬಾರದನ್ನು ಮಾಡಿ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಅಷ್ಟಕ್ಕೂ ಈತ ಕೇವಲ ಅಜ್ಜಿ ಬೈದರೆಂದು ಸಿಟ್ಟಿಗೆದ್ದು ಆಕೆಯನ್ನು ತಳ್ಳಿದ್ದಾನೆ ಆಯತಪ್ಪಿ ಬಿದ್ದ ಆಕೆ ಅಲ್ಲಿಯೇ ಬಿದ್ದು ಪ್ರಾಣ ಕಳಕೊಂಡಿದ್ದಾರೆ. ಆದರೆ ಆ ಬಳಿಕ ಸತ್ತು ಬಿದ್ದ ಅಜ್ಜಿಯನ್ನು ಇನ್ನೇನು ಮಾಡುವುದೆಂದು ತೋಚದೆ ಮೃತದೇಹವನ್ನು ಕಾರಿನಲ್ಲಿಟ್ಟು ಊರೆಲ್ಲಾ ಸುತ್ತಾಡಿದ್ದಾನೆ. ಕೊನೆಗೆ ಕೆಆರ್ ಎಸ್ ಹಿನ್ನೀರಿನ ಬಳಿ ಸುಟ್ಟು ಹಾಕಿದ್ದಾನೆ. ಬಳಿಕ ಅಜ್ಜಿ ನಾಪತ್ತೆಯಾಗಿದ್ದಾರೆಂದು ಪೊಲೀಸ್ ದೂರು ದಾಖಲಿಸಿದ್ದಾನೆ. ಆದರೆ ಇದೀಗ ಪೊಲೀಸ್ ತನಿಖೆಯಲ್ಲಿ ಮೊಮ್ಮಗನೇ ಕೊಲೆಗಾರ ಎಂದು ಬಯಲಾಗಿದೆ.

ಮೈಸೂರಿನ ಗಾಯತ್ರಿಪುರಂ ನಿವಾಸಿ ಸುಲೋಚನಾ(75) ಮೃತಪಟ್ಟ ವೃದ್ಧ ಮಹಿಳೆ. ಸುಪ್ರೀತ್ (23) ಎಂಬ ಯುವಕ ಅಜ್ಜಿಯನ್ನೇ ಕೊಲೆಗೈದ ಮೊಮ್ಮಗ.

ಕೆಆರ್ ಎಸ್ ಹಿನ್ನೀರು ವ್ಯಾಪ್ತಿಯ ಸಾಗರಕಟ್ಟೆ ಗ್ರಾಮದ ಬಳಿಯ ಗುಂಡಿಯಲ್ಲಿ ಮೇ 30ರಂದು ಅರೆಬರೆ ಸುಟ್ಟಿರುವ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿದ್ದ ಮೈಸೂರು ದಕ್ಷಿಣ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವವರ ಮಾಹಿತಿ ಕಲೆಹಾಕಿದ್ದರು. ತಲೆಕೂದಲು ಹಾಗೂ ಮೃತದೇಹದಲ್ಲಿ ದೊರಕಿರುವ ಕನ್ನಡಕವನ್ನು ಆಧರಿಸಿ ತನಿಖೆ ಆರಂಭಿಸಿದ್ದಾಅರೆ.

ಇದೇ ಸಂದರ್ಭ ನಜರಬಾದ್ ಠಾಣೆಯಲ್ಲಿ ಅಜ್ಜಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಸುಪ್ರೀತ್ ದೂರು ನೀಡಿದ್ದ ಯುವಕನೆಂದು ತಿಳಿದು ತನಿಖೆಯನ್ನು ಅಲ್ಲಿಗೆ ವಿಸ್ತರಣೆ ಮಾಡಿದ್ದರು. ಅಜ್ಜಿಯನ್ನು ಕೊಂದು ಹಾಕಿದ್ದ ಸುಪ್ರೀತ್ ಕೊರಿಯನ್ ವೆಬ್ ಸಿರೀಸ್ ನೋಡಿ, ಹೆಣ ಸುಟ್ಟು ಹಾಕಿ ಬಚಾವಾಗಲು ಪ್ಲಾನ್ ಮಾಡಿದ್ದ. ಮೇ 28ರಂದು ಕೊಲೆ ಮಾಡಿದ್ದರೂ, ಎರಡು ದಿನಗಳ ಕಾಲ ಮೃತದೇಹವನ್ನು ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಕಾರಿನಲ್ಲಿಟ್ಟೇ ಸುತ್ತಾಡಿದ್ದಾನೆ. ಕೊನೆಗೆ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾನೆ. ಈ ನಡುವೆ, ಅಜ್ಜಿ ಮೇತದೇಹವನ್ನು ಕಾರಿನಲ್ಲಿಟ್ಟೇ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದ.

ಮಿಸ್ಸಿಂಗ್ ಕಂಪ್ಲೇಂಟ್ ಆಧರಿಸಿ ಸುಪ್ರೀತ್ ನನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಹೇಳಿಕೆಯಲ್ಲಿ ಸಂಶಯ ಕಂಡು ಬಂದಿದೆ. ಮತ್ತಷ್ಟು ವಿಚಾರಣೆ ನಡೆಸಿದಾಗ ನಿಜ ವಿಚಾರ ಬಾಯಿಬಿಟ್ಟಿದ್ದಾನೆ. ಮನೆಯಲ್ಲಿ ದೂಡಿ ಹಾಕಿ, ಕೆಳಕ್ಕೆ ಬಿದ್ದಿರುವ ಆಕೆಯ ಮುಖಕ್ಕೆ ತಲೆದಿಂಬು ಇಟ್ಟು ಉಸಿರುಕಟ್ಟಿಸಿ ಕೊಂದಿದ್ದಾಗಿ ಬಾಯಿಬಿಟ್ಟಿದ್ದಾನೆ. ಅಜ್ಜಿ ಪ್ರತಿ ಮಾತಿಗೆ ಬೈಯುತ್ತಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆಗೈದಿದ್ದೇನೆ ಎಂದಿದ್ದಾನೆ. ಸಿಟ್ಟಿನ ಕೈಗೆ ಬುದ್ದಿ ಕೊಟ್ಟ ಬಿಸಿಎ ಕಲಿಯುತ್ತಿದ್ದ ವಿದ್ಯಾರ್ಥಿಯೀಗ ಜೈಲು ಪಾಲಾಗಿದ್ದಾನೆ. 

Ads on article

Advertise in articles 1

advertising articles 2

Advertise under the article