-->
1000938341
ಖಳನಟನ ಬಾಳ ಸಂಗಾತಿಯಾದ ಗಣಿತ ಶಿಕ್ಷಕಿ: ಕಬ್ಜ ಸಿನಿಮಾ ನಟನ ಮದುವೆ ಫೋಟೋ ಇಲ್ಲಿದೆ

ಖಳನಟನ ಬಾಳ ಸಂಗಾತಿಯಾದ ಗಣಿತ ಶಿಕ್ಷಕಿ: ಕಬ್ಜ ಸಿನಿಮಾ ನಟನ ಮದುವೆ ಫೋಟೋ ಇಲ್ಲಿದೆ


ಮುಂಬೈ: ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಗಳ ಪ್ರಖ್ಯಾತ ಖಳನಟ ಕಬೀರ್ ದುಹಾನ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟ ಕಬೀರ್ ದುಹಾನ್ ಸಿಂಗ್, ದೆಹಲಿಯಲ್ಲಿ ಸೀಮಾ ಚಾಹಲ್ ಅವರನ್ನು ವಿವಾಹವಾಗಿದ್ದಾರೆ. ಹರಿಯಾಣದ ಮೂಲದವರಾದ ವಧು ಸೀಮಾ ವೃತ್ತಿಯಲ್ಲಿ ಗಣಿತ ಶಿಕ್ಷಕಿಯಾಗಿದ್ದಾರೆ.


ತಮ್ಮ ವಿವಾಹದ ಫೋಟೊಗಳನ್ನು ಕಬೀರ್ ದುಹಾನ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು,  ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಕಾಮೆಂಟ್ ಮೂಲಕ ನವದಂಪತಿಗೆ ಶುಭಕೋರಿದ್ದಾರೆ. ಕಬೀರ್ ದುಹಾನ್ ಸಿಂಗ್ ಹಾಗೂ ಸೀಮಾ ಚಾಹಲ್ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಕಬೀರ್ ಶೇರ್ವಾನಿ ಧರಿಸಿದ್ದರೆ, ವಧು ಕುಂದನ್ ಆಭರಣದೊಂದಿಗೆ ಅಲಂಕೃತಗೊಂಡ ಕೆಂಪು ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರು.


ಕಬೀರ್ ದುಹಾನ್ ಸಿಂಗ್ 2015ರಲ್ಲಿ ಬಿಡುಗಡೆಯಾದ ಅಜಿತ್ ಕುಮಾರ್ ಅಭಿನಯದ ವೇದಲಂ ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡುವ ಮೂಲಕ ತಮಿಳು ಸಿನಿಮಾಕ್ಕೆ ಪಾದಾರ್ಪಣೆ ಮಾಡಿದರು. ಉಪೇಂದ್ರ ಮತ್ತು ಸುದೀಪ್ ಕಬ್ಬದ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article