-->
1000938341
ಬಂಟ್ವಾಳ: ಡಿಶ್ ರಿಪೇರಿ ಮಾಡಲು ಹೋಗಿ ಮೂರನೇ ಮಹಡಿಯಿಂದ ಬಿದ್ದು ಯುವಕ ದಾರುಣ ಸಾವು

ಬಂಟ್ವಾಳ: ಡಿಶ್ ರಿಪೇರಿ ಮಾಡಲು ಹೋಗಿ ಮೂರನೇ ಮಹಡಿಯಿಂದ ಬಿದ್ದು ಯುವಕ ದಾರುಣ ಸಾವು


ಬಂಟ್ವಾಳ: ವಸತಿ ಸಮುಚ್ಚಯದ ಮೂರನೇ ಮಹಡಿಯಿಂದ ಡಿಶ್ ರಿಪೇರಿ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಯುವಕನೋರ್ವನು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಬಿ.ಸಿ.ರೋಡ್ - ಕೈಕಂಬದಲ್ಲಿ ಸಂಭವಿಸಿದೆ.

ಕೊಯಿಲ ಗ್ರಾಮದ ಗೋವಿಂದಬೆಟ್ಟು ನಿವಾಸಿ ಯತಿನ್ ಗಾಣಿಗ (30) ಮೃತಪಟ್ಟ ದುರ್ದೈವಿ ಯುವಕ.

ಯತಿನ್ ಕೈಕಂಬದ ವಸತಿಗೃಹವೊಂದರ ಮೂರನೇ ಮಹಡಿಯಲ್ಲಿ ಡಿಶ್ ರಿಪೇರಿ ಮಾಡುತ್ತಿದ್ದರು. ಈ ವೇಳೆ ಕಾಲು ಜಾರಿದ ಬಿದ್ದ ಅವರು ಕೆಳಗಡೆಯಿದ್ದ ಬಾವಿಗೆ ಅಳವಡಿಸಿದ್ದ ಕಬ್ಬಿಣದ ರಕ್ಷಣಾ ಬೇಲಿಗೆ ತಲೆ ಬಡಿದು  ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವವಾಗಿ ಗಾಯಗೊಂಡಿದ್ದ ಯತಿನ್ ರನ್ನು ಸ್ಥಳೀಯರು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 10 ವರ್ಷಗಳಿಂದ ಟಿವಿ ರಿಪೇರಿ, ಡಿಶ್ ಅಳವಡಿಕೆ ಮತ್ತು ಎಸಿ ಮೆಕ್ಯಾನಿಕ್ ವೃತಿ ನಡೆಸುತ್ತಿದ್ದು ಮನೆಗೆ ಆಧಾರ ಸ್ತಂಭವಾಗಿದ್ದ ಯತಿನ್  ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article