ಹೃದಯಾಘಾತದಿಂದ ಲೇಡಿ ಪೊಲೀಸ್ ಮೃತ್ಯು: 2021ರಲ್ಲಿ ಕೊರೊನಾ ಸೋಂಕಿಗೆ ಪತಿ ಬಲಿ - ಅನಾಥವಾಯ್ತು ಒಂದೂವರೆ ವರ್ಷದ ಹಸಗೂಸು


ಬೆಂಗಳೂರು: ಕೆಂಗೇರಿ ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿ ಪ್ರಿಯಾಂಕಾ ಎಂಬವರು ಹೃದಯಾಘಾತದಿಂದ ರವಿವಾರ ರಾತ್ರಿ ಮೃತಪಟ್ಟಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮೂಲದ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಪ್ರಿಯಾಂಕಾ ಆರೋಗ್ಯ ಸರಿ ಇರಲಿಲ್ಲವೆಂದು ಜೂ.17ರಿಂದ ರಜೆಯಲ್ಲಿದ್ದರು. ಭಾನುವಾರ ನಗರದಿಂದ ತಮ್ಮ ಊರಾದ ಅಜ್ಜಂಪುರಕ್ಕೆ ತೆರಳಿದ್ದರು. ರಾತ್ರಿ 11.30ರ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಪಾಸಣೆ ಮಾಡಿದ ವೈದ್ಯರು ಪ್ರಿಯಾಂಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸ್ ಕಾನ್‌ಸ್ಟೆಬಲ್ ಕೆಲಸಕ್ಕೆ 2018ರಲ್ಲಿ ನೇಮಕವಾಗಿದ್ದರು. ಅದೇ ವರ್ಷವೇ ಅವರಿಗೆ ವಿವಾಹವಾಗಿತ್ತು. ಆದರೆ 2021ರ ಕೊರೋನಾ ಸಂದರ್ಭ ಪ್ರಿಯಾಂಕಾ ಪತಿ ಸಾವಿಗೀಡಾಗಿದ್ದರು. ಪತಿ ಸಾವಿನ ವೇಳೆ ಅವರು ಒಂದು ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ಒಂದು ವರ್ಷ ಏಳು ತಿಂಗಳ ಹಸುಗೂಸು ತಂದೆ - ತಾಯಿಯನ್ನು ಕಳೆದುಕೊಂಡು ಅಕ್ಷರಶಃ ಅನಾಥವಾಗಿದೆ. ಪ್ರಿಯಾಂಕಾ ಅವರ ಸಾವಿಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಂಬಿನಿ ಮಿಡಿದಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu