-->

ತವರಲ್ಲೇ ಎಡವಿದ ಬಿಜೆಪಿ ರಾಜ್ಯಾಧ್ಯಕ್ಷ: ಕೈ ಪಾಲಾದ ಪುತ್ತೂರು

ತವರಲ್ಲೇ ಎಡವಿದ ಬಿಜೆಪಿ ರಾಜ್ಯಾಧ್ಯಕ್ಷ: ಕೈ ಪಾಲಾದ ಪುತ್ತೂರು

ತವರಲ್ಲೇ ಎಡವಿದ ಬಿಜೆಪಿ ರಾಜ್ಯಾಧ್ಯಕ್ಷ: ಕೈ ಪಾಲಾದ ಪುತ್ತೂರು





ಬಿಜೆಪಿಯ ಅಬೇಧ್ಯ ಕೋಟೆ ಎಂದೇ ಪರಿಗಣಿಸಲಾದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. 


ನಳಿನ್ ಕುಮಾರ್ ಕಟೀಲ್ ಅವರ ತವರು ಕ್ಷೇತ್ರವಾದ ಇಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿ ಆಯ್ಕೆಯಲ್ಲೇ ಎಡವಿದ್ದು ಸ್ಪಷ್ಟವಾಗಿದ್ದು, ಕಾಂಗ್ರೆಸ್ ನಿರಾಯಾಸವಾಗಿ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.



ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭದಲ್ಲೇ ನಳಿನ್ ಕುಮಾರ್ ಅವರ ಮೇಲೆ ಪಕ್ಷದ ಕಾರ್ಯಕರ್ತರು, ಹಿಂದೂತ್ವದ ನಾಯಕರು ಅಸಮಾಧಾನಗೊಂಡಿದ್ದರು. ಸ್ಥಳೀಯ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ನಿರಾಸಕ್ತಿ, ಕಾರ್ಯಕರ್ತರ ಕಡೆಗಣನೆಗೆ ನೆಟ್ಟಾರು ಹತ್ಯೆ ಘಟನೆ ಮತ್ತಷ್ಟು ತುಪ್ಪ ಸುರಿದಿತ್ತು.



ಘಟನಾ ಸ್ಥಳಕ್ಕೆ ತಕ್ಷಣ ಭೇಟಿ ನೀಡುವಲ್ಲಿ ವಿಳಂಬ ಮಾಡಿದ ನಳಿನ್ ಅವರ ಮೇಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ಇತಿಹಾಸ. ಈ ಕಾರಣಕ್ಕಾಗಿಯೇ ನೆಟ್ಟಾರು ಕುಟುಂಬಕ್ಕೆ ಹೊಸ ಮನೆ ಕಟ್ಟಿಕೊಡಲು ಈ ಆಕ್ರೋಶವೂ ಪ್ರೇರಣೆಯಾಯಿತು. ಪ್ರವೀಣ್ ಪತ್ನಿಗೆ ಸರ್ಕಾರಿ ಕೆಲಸವೂ ದೊರೆಯಿತು.



ಆದರೆ, ಕಾರ್ಯಕರ್ತರ ಆಕ್ರೋಶ, ಮನದೊಳಗಿನ ಬೇಗುದಿಯನ್ನು ಅಂದಾಜಿಸಲು ಸ್ಥಳೀಯ ಬಿಜೆಪಿ ನಾಯಕರು ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಫಲರಾದರು. ಮತ್ತು ಇದೇ ಕಾರಣಕ್ಕೆ ಈ ಕಾರ್ಯಕರ್ತರ ಭಾವನೆಗಳ ಪ್ರತೀಕ ಎಂಬಂತೆ ಯುವ ನಾಯಕ ಅರುಣ ಕುಮಾರ್ ಪುತ್ತಿಲ ಅಖಾಡಕ್ಕೆ ಇಳಿದರು.



ಬಿಜೆಪಿಯ ಹಿಂದೂತ್ವಕ್ಕೆ ಕಾರ್ಯಕರ್ತರ ಹಿಂದೂತ್ವ ಠಕ್ಕರ್ ನೀಡಿತು. ಅತಿರಥ ಮಹಾರಥರೇ ಈ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದರು. ಆರ್‌ಎಸ್‌ಎಸ್‌ ನಾಯಕ್ ಕಲ್ಲಡ್ಕ ಪ್ರಭಾಕರ ಭಟ್ ಅವರೂ ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ ನಡೆಸಿದರೂ ಮೂರನೇ ಸ್ಥಾನದಿಂದ ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ.



ಇದು ನಳಿನ್ ಅವರ ವೈಯಕ್ತಿಕ ಸೋಲು ಎಂಬಂತೆ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪರಿಗಣಿಸುತ್ತಾರೆ. ಈ ಸೋಲಿಗೆ ನಳಿನ್ ಅವರೇ ನೇರ ಹಾಗೂ ಏಕೈಕ ಹೊಣೆ ಎಂದು ಬಹುತೇಕ ಕಾರ್ಯಕರ್ತರು, ನಾಯಕರು ಅಭಿಪ್ರಾಯಪಡುತ್ತಾರೆ.


ಇತರ ಕ್ಷೇತ್ರಕ್ಕಿಂತಲೂ ಪುತ್ತೂರು ಅತಿ ಮಹತ್ವದ್ದು ಎಂಬುದು ಪಕ್ಷಕ್ಕೆ ಚೆನ್ನಾಗಿ ಅರಿವಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರು ತನ್ನ ತವರು ನೆಲದಲ್ಲಿ ಉಂಟಾದ ಸೋಲಿನ ಹೊಣೆ ಹೊರಬೇಕಾಗಿದೆ.

.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article