-->
ಮರವೇರಿ ಲಿಚಿ ಹಣ್ಣು ಕಿತ್ತ ಬಾಲಕ: ಥಳಿಸಿ ನೀರಿನ‌ಹೊಂಡಕ್ಕೆಸೆದು ಕೊಂದ ಮನೆ ಮಾಲಕ

ಮರವೇರಿ ಲಿಚಿ ಹಣ್ಣು ಕಿತ್ತ ಬಾಲಕ: ಥಳಿಸಿ ನೀರಿನ‌ಹೊಂಡಕ್ಕೆಸೆದು ಕೊಂದ ಮನೆ ಮಾಲಕ


ಪಾಟ್ನಾ: ಮರದಿಂದ ಲಿಚಿಹಣ್ಣು ಕಿತ್ತಿದ್ದಾನೆಂದು 12ರ ಬಾಲಕನನ್ನು ದಾರುಣವಾಗಿ ಥಳಿಸಿ ನೀರಿನ ಹೊಂಡಕ್ಕೆ ಎಸೆದಿರುವ ಘಟನೆ ಬಿಹಾರದ ಪಾಟ್ನಾ ಸಮೀಪದ ನಡೆದಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಬಾಲಕ ಮೃತಪಟ್ಟಿದ್ದಾನೆ. ಆರೋಪಿಯೀಗ ತಲೆಮರೆಸಿಕೊಂಡಿದ್ದಾನೆ.

ಮೃತ ಬಾಲಕನನ್ನು ದೀಪಕ್ ಎಂದು ಗುರುತಿಸಲಾಗಿದೆ.

ದೀಪಕ್ ಹಾಗೂ ಆತನ ಸ್ನೇಹಿತರು ಸಾಯಂಕಾಲ ಬಯಲಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅಲ್ಲಿಯೇ ಸಮೀಪದ ಮನೆಯೊಂದರ ಮರದಲ್ಲಿ ಲಿಚಿ ಹಣ್ಣು ನೋಡಿದ್ದಾರೆ. ಬಾಲಕರು ಮರವನ್ನು ಏರಲು ಯತ್ನಿಸಿದ್ದಾರೆ. ಇದೇ ವೇಳೆ ದೀಪಕ್ ಮತ್ತು ಅವನ ಸ್ನೇಹಿತ ಮನೆಯ ಮಾಲಕನಾದ ಮಕ್ಬುಲ್ ಬೈತಾ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮನೆಯ ಮಾಲಕ ಬಾಲಕರನ್ನು ದಾರುಣವಾಗಿ ಥಳಿಸಿ ನೀರಿನ ಹೊಂಡಕ್ಕೆ ಎಸೆದಿದ್ದಾನೆ. ಭೀಕರವಾಗಿ ಗಾಯಗೊಂಡಿದ್ದ ಬಾಲಕರಿಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ದೀಪಕ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಮತ್ತೋರ್ವ ಬಾಲಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಮನೆ ಮಾಲಕ ಮಕ್ಬುಲ್ ಬೈತಾ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದೀಗ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article