-->
ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಸಹಪಾಠಿ ಸಾವಿಗೆ ಶರಣು

ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಸಹಪಾಠಿ ಸಾವಿಗೆ ಶರಣು


ಲಖನೌ: ವಿದ್ಯಾರ್ಥಿಯೋರ್ವನು ತನ್ನ ಸ್ನೇಹಿತೆಯನ್ನೇ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಮಾಡಿರುವ ಘಟನೆ ಉತ್ತರಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯ ನೋಯ್ಡಾದ ಶಿವ್ ನಾದ‌ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಅನುಜ್ ಸಿಂಗ್(21) ಹಾಗೂ ನೇಹಾ ಚೌರಾಸಿಯಾ(21) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. 

ಮೂರನೇ ವರ್ಷ ಸಮಾಜಶಾಸ್ತ್ರ ಪದವಿ ವಿದ್ಯಾರ್ಥಿ ಅನುಜ್ ಸಿಂಗ್ ಕೃತ್ಯ ಎಸಗಿದ್ದಾನೆ. ಆತ ಆಕೆಯೊಂದಿಗೆ ಜಗಳವಾಡಿದ ಬಳಿಕ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ವಿದ್ಯಾರ್ಥಿಯು ಹಾಸ್ಟೆಲ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೃತ ಯುವತಿ ತಂದೆ ರಾಜ್‌ಕುಮಾರ್ ಚೌರಾಸಿಯಾ ವಿಶ್ವವಿದ್ಯಾಲಯದಲ್ಲಿನ ಭದ್ರತೆಯನ್ನು ಪ್ರಶ್ನಿಸಿದ್ದಾರೆ ಮತ್ತು ಒಬ್ಬ ವ್ಯಕ್ತಿ ಗನ್ ಹಿಡಿದು ತಿರುಗಾಡಲು ಹೇಗೆ ಬಿಟ್ಟಿದ್ದೀರಿ.‌ ಕಾಲೇಜ್‌ನಲ್ಲಿ ಅನೇಕ ಮಂದಿ ಸೆಕ್ಯೂರಿಟಿ ಗಾರ್ಡ್‌ಗಳು ಇದ್ದರೂ ಸಹ ಆತ ನನ್ನ ಪುತ್ರಿಯ ಮೇಲೆ ಎರಡು ಭಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ವಿಶ್ವವಿದ್ಯಾಲಯದವರು ಅಪಘಾತಕ್ಕೀಡಾಗಿದ್ದಾಳೆ ಎಂದು ನನಗೆ ಕರೆ ಮಾಡಿ ಹೇಳಿದ್ದರು ಇಲ್ಲಿ ನೋಡಿದರೆ ಬೇರೆಯದೆ ನಡೆದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article