ಕೊಲ್ಲಂ: ಸಿನಿಮಾ ನಟಿಯನ್ನು ತನ್ನೊಂದಿಗೆ ಮಲಗಲು ಒತ್ತಾಯಿಸಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಕೇರಳದ ಮಾಜಿ ಡಿವೈಎಸ್ ಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲ್ಲಂನ ಕಿರುತೆರೆಯ ನಟಿಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪದ ಮೇಲೆ ಕೇರಳದ ನಿವೃತ್ತ ಡಿವೈಎಸ್‌ಪಿ ಮಧುಸೂದನನ್ ವಿರುದ್ಧ ದೂರು ದಾಖಲಾಗಿದೆ. ಬೇಕಲ್ ಡಿವೈಎಸ್‌ಪಿಗೆ ಸಲ್ಲಿಸಿರುವ ದೂರಿನ ಪ್ರಕಾರ, ಸಂತ್ರಸ್ತ ನಟಿ ಪೆರಿಯಾದ ಹೋಮ್‌ಸ್ಟೇನಲ್ಲಿ ಉಳಿದುಕೊಂಡಿದ್ದ ವೇಳೆ ಈ ಘಟನೆ ನಡೆದಿದೆ. ಬಲವಂತವಾಗಿ ತನಗರ ಬಿಯರ್ ಕುಡಿಸಿ, ತನ್ನ ರೂಮಿನಲ್ಲಿ ತನ್ನೊಂದಿಗೆ ಮಲಗಿಕೊಳ್ಳಲು ಮಧುಸೂದನ್ ಬಲವಂತ ಮಾಡಿದ್ದಾನೆ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಟಿಯು ಕಿರುಚಿತ್ರದಲ್ಲಿ ನಟಿಸಲು ಕಾಸರಗೋಡಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ತ್ರಿಕಾರಿಪುರ್ ನಿವಾಸಿಯಾಗಿರುವ ಆರೋಪಿ ವಿ. ಮಧುಸೂದನ್ ಕೂಡ ಸಿನಿಮಾ ನಟ. ಸದ್ಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.