ಮಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ಗ್ಯಾರಂಟಿ ಸ್ಕೀಮ್ ಅನುಷ್ಠಾನಗೊಳ್ಳದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ - ಯು.ಟಿ.ಖಾದರ್


ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳೊಳಗೆ ಗ್ಯಾರಂಟಿ ಸ್ಕೀಮ್ ಗಳು ಅನುಷ್ಠಾನಗೊಳ್ಳದಿದ್ದಲ್ಲಿ ತನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.

ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಡಳಿತದ ನೋವನ್ನು ಜನರು ಮತದಾನದಲ್ಲಿ ತೋರಿಸಲಿದ್ದಾರೆ‌. ಜನರ ನೋವು ಶಮನಗೊಳಿಸುವುದೇ ಕಾಂಗ್ರೆಸ್ ನ ಗ್ಯಾರಂಟಿ ಸ್ಕೀಮ್. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ. ಐದೂ ಗ್ಯಾರಂಟಿ ಸ್ಕೀಮ್ ಗಳು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಅನುಷ್ಠಾನವಾಗಲಿದೆ ಎಂದರು.

ನಳಿನ್ ಕುಮಾರ್ ಕಟೀಲು, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಅಂಗಾರ ಅವರು ಬಜೆಟ್‌ನಲ್ಲಿ ಅನುದಾನ ಮೀಸಲಿಡದೆ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿ ಜನರಿಗೆ ಮೋಸ ಮಾಡಿದ್ದಾರೆ. 2ಬಿ ಹಿಂತೆಗೆದು ಸಣ್ಣ ಸಣ್ಣ ಸಮುದಾಯಕ್ಕೆ ಕೊಡದೇ ಬೇರೆಯವರಿಗೆ ಕೊಟ್ಟಿದ್ದಾರೆ. ಇದನ್ನು ಕೋರ್ಟ್ ಒಪ್ಪೋದಿಲ್ಲವೆಂದು ಅವರಿಗೂ ಗೊತ್ತಿದೆ‌. ಬಿಜೆಪಿ ಗಲಭೆ ಪ್ರಿಯ, ತಾರತಮ್ಯದ ಮತ್ತು ಕೋಮು ಬೆಂಬಲಿತ ಸರ್ಕಾರವೆಂದು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಮತದಾರರು ಮತ್ತೆ ಬಿಜೆಪಿಗೆ ಯಾವುದೇ ಕಾರಣಕ್ಕೆ ಅವಕಾಶ ಕೊಡಬಾರದು. ಚುನಾವಣೆ ವೇಳೆ ಅಸಂಬದ್ಧ ಹೇಳಿಕೆ ನೀಡುವ ಬಿಜೆಪಿಯ ಭವಿಷ್ಯ ಮೇ 13ಕ್ಕೆ ಅಂತ್ಯಗೊಳ್ಳಲಿದೆ ಎಂದು ಯು.ಟಿ.ಖಾದರ್ ಹೇಳಿದರು.