-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸಂಬಂಧಿಕರ ಮನೆಯಲ್ಲಿಯೇ 2.5 ಕೋಟಿ ರೂ. ನಗದು ಹಾಗೂ 100 ಸವರನ್ ಚಿನ್ನಾಭರಣವನ್ನು ಎಗರಿಸಿದ ಚಾಲಕಿ ಸುಂದರಿ

ಸಂಬಂಧಿಕರ ಮನೆಯಲ್ಲಿಯೇ 2.5 ಕೋಟಿ ರೂ. ನಗದು ಹಾಗೂ 100 ಸವರನ್ ಚಿನ್ನಾಭರಣವನ್ನು ಎಗರಿಸಿದ ಚಾಲಕಿ ಸುಂದರಿ



ಚೆನ್ನೈ: ರಿಯಲ್ ಎಸ್ಟೇಟ್ ಮಾಲಕಿಯ ಮನೆಯಲ್ಲಿ ನಗ - ನಗದು ದೋಚಿದ ಚಾಲಕಿ ಸುಂದರಿ ಹಾಗೂ ಆಕೆಯ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.

ತಿರುವಳ್ಳೂರು ಮೂಲದ ಅರುಣ್‌ಕುಮಾರ್ (37) ಮತ್ತು ಆತನ ಸ್ನೇಹಿತರಾದ ಸುರೇಂದ್ರನ್, ವರ್ಷಿಣಿ(29) ಹಾಗೂ ಆಕೆಯ ಸಹಚರ ಅರುಣ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಾರ್ಚ್ 20ರಂದು ಇವರೆಲ್ಲರೂ ಸೇರಿ ಮನೆಯನ್ನು ದೋಚಿದ್ದರು.

ಸಿಂಗನಲ್ಲೂರು ಮೂಲದ ವರ್ಷಿಣಿ ಕೊಯಮತ್ತೂರಿನ ಪುಲಿಯಾಕುಲಂ ಗ್ರೀನ್‌ಫೀಲ್ಡ್ ಕಾಲನಿಯಲ್ಲಿರುವ ರಾಜೇಶ್ವರಿ (63) ಮನೆಯಲ್ಲಿ ಕಳ್ಳತನ ಎಸಗಿದ್ದಳು. ವರ್ಷಿಣಿ ಈ ಮನೆಯಲ್ಲಿ ಬರೋಬ್ಬರಿ 2.5 ಕೋಟಿ ರೂ. ನಗದು ಹಾಗೂ 100 ಸವರನ್ ಚಿನ್ನಾಭರಣವನ್ನು ಎಗರಿಸಿದ್ದಳು.

ಮನೆಯಲ್ಲಿ ರಾಜೇಶ್ವರಿ ಓರ್ವರೇ ವಾಸವಾಗಿದ್ದರು. ವರ್ಷಿಣಿ ರಾಜೇಶ್ವರಿಗೆ ಸಂಬಂಧಿಯೂ ಆಗಬೇಕು. ರಾಜೇಶ್ವರಿಯವರಿಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಳು. ಮಾರ್ಚ್ 20ರಂದು ಆಹಾರದಲ್ಲಿ ಪ್ರಜ್ಞೆ ತಪ್ಪುವ ಔಷಧಿ ಹಾಕಿ ರಾಜೇಶ್ವರಿ ಅವರನ್ನು ನಿದ್ದೆಗೆ ಜಾರುವಂತೆ ಮಾಡಿದ್ದಳು. ಬಳಿಕ ತಂಡ ಹಣ ಹಾಗೂ ಚಿನ್ನಾಭರಣ ದೋಚಿ ಅಲ್ಲಿಂದ ಪರಾರಿಯಾಗಿದ್ದರು. ಆಕೆಯ ಸ್ನೇಹಿತ ಅರುಣ್ ಸಹಾಯದಿಂದಲೇ ಕಳ್ಳತನ ಮಾಡಿದ್ದಳು.

ಕಳ್ಳತನ ಮಾಡಿದ ಹಣದಲ್ಲಿ 33.2 ಲಕ್ಷ ರೂ. ಮತ್ತು ಆರು ಜೊತೆ ಚಿನ್ನದ ಬಳೆಗಳನ್ನು ತನ್ನ ಸ್ನೇಹಿತರಿಗೆ ನೀಡಿದ್ದಳು. ಪ್ರಕರಣದ ಆರೋಪಿ ಅರುಣ್ ನೀಡಿದ ಹೇಳಿಕೆಯನ್ವಯ ಇತರರನ್ನು ಕೂಡ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಲಾಗಿತ್ತು. ಪ್ರಕರಣ ದಾಖಲಾಗಿದ್ದಾಗಿನಿಂದ ಮಹಿಳೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಕೊನೆಗೂ ಈ ಖತರ್ನಾಕ್ ಸುಂದರಿ ಸಿಕ್ಕಿಬಿದ್ದಿದ್ದಾಳೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ