-->
ಸಹಾಯದ ನೆಪದಲ್ಲಿ ಗರ್ಭಿಣಿ ಮೇಲೆಯೇ ಅತ್ಯಾಚಾರ,10ಲಕ್ಷ ವಂಚನೆ: ಯುವಕ ಅರೆಸ್ಟ್

ಸಹಾಯದ ನೆಪದಲ್ಲಿ ಗರ್ಭಿಣಿ ಮೇಲೆಯೇ ಅತ್ಯಾಚಾರ,10ಲಕ್ಷ ವಂಚನೆ: ಯುವಕ ಅರೆಸ್ಟ್


ಕೊಲ್ಲಂ: ಸಹಾಯ ಮಾಡುವ ನೆಪದಲ್ಲಿ ಗರ್ಭಿಣಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ. 

ಪೂತಕ್ಕುಳಂ ಪರವೂ‌ ಮೂಲದ ನಿವಾಸಿ ಸುಬೀರ್ ಬಂಧಿತ ಆರೋಪಿ.

ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿರುವ ಪತಿಯನ್ನು ಬಿಡುಗಡೆ ಮಾಡಲು ಗರ್ಭಿಣಿಗೆ ಸಹಾಯ ಮಾಡುವುದಾಗಿ ಆರೋಪಿ ಸುಬೀರ್ ಮುಂದೆ ಬಂದಿದ್ದನು. ಆತನ ಮಾತನ್ನು ಸಂತ್ರಸ್ತೆ ಗರ್ಭಿಣಿ ನಂಬಿದ್ದಳು. ಆದರೆ ಕಾಮುಕ ಸುಬೀರ್ ಆಕೆಗೆ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ನಗ್ನ ಚಿತ್ರಗಳನ್ನು ತೆಗೆದುಕೊಂಡು, ಅತ್ಯಾಚಾರದ ಬಗ್ಗೆ ಎಲ್ಲಾದರೂ ಹೇಳಿದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಆ ಬಳಿಕ ಸಂತ್ರಸ್ತೆಯೊಂದಿಗೆ ಆತ್ಮೀಯತೆ ಬೆಳೆಸಿಕೊಂಡ ಆರೋಪಿ ಸುಬೀರ್, ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಲವು ಬಾರಿ ಹಣ ತೆಗೆದುಕೊಂಡಿದ್ದಾನೆ. ಹೀಗೆ ಆತ ಒಟ್ಟು 10 ಲಕ್ಷ ರೂ.ವರೆಗೆ ಸುಲಿಗೆ ಮಾಡಿದ್ದಾನೆ. ಅಲ್ಲದೆ ಉದ್ಯೋಗ ಸಂದರ್ಶನದ ನೆಪದಲ್ಲಿ ಆಕೆಯನ್ನು ಎರ್ನಾಕುಲಂನ ಹೋಟೆಲ್‌ಗೆ ಕರೆದೊಯ್ದು ಆಕೆ ಗರ್ಭಿಣಿ ಎಂದು ತಿಳಿದಿದ್ದರೂ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಸುಬೀರ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article