-->

ಬೆ*ತ್ತಲೆ ಸಿನಿಮಾದಲ್ಲಿ ನಟಿಸ್ತೀರ ಎಂದು ಕನ್ನಡ ನಟಿಗೆ ಕೇಳಿದ ಯೂಟ್ಯೂಬರ್- ಮುಂದೇನಾಯ್ತು ಗೊತ್ತಾ? - VIDEO ನೋಡಿ

ಬೆ*ತ್ತಲೆ ಸಿನಿಮಾದಲ್ಲಿ ನಟಿಸ್ತೀರ ಎಂದು ಕನ್ನಡ ನಟಿಗೆ ಕೇಳಿದ ಯೂಟ್ಯೂಬರ್- ಮುಂದೇನಾಯ್ತು ಗೊತ್ತಾ? - VIDEO ನೋಡಿ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳ ಗೌರಿ ಮದುವೆ' ಸೀರಿಯಲ್ ನಲ್ಲಿ‌ ನೆಗೆಟಿವ್ ಶೇಡ್ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದ ನಟಿ ತನಿಷಾ ಕುಪ್ಪಂಡ ಐದು ವಿಭಿನ್ನ ಕಥೆಗಳನ್ನೊಳಗೊಂಡ 'ಪೆಂಟಗನ್' ಸಿನಿಮಾದಲ್ಲಿ ನಟಿಸಿದ್ದಾರೆ. ಎ.7ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ತನಿಷಾ ಕುಪ್ಪಂಡ ಈ ಸಿನಿಮಾದಲ್ಲಿ ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್, ಬ್ಯಾಕ್‌ಲೆಸ್ ವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಐದು ಕತೆಗಳಿದ್ದು, ಐವರು ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ. ಆದ್ದರಿಂದ ಈ ಸಿನಿಮಾದ ಮೇಲೆ ಪೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.‌ ಈ ಸಿನಿಮಾ ಪ್ರಚಾರದ ಅಂಗವಾಗಿ ತನಿಷಾ ಕುಪ್ಪಂಡ ಇತ್ತೀಚೆಗೆ ಯೂಟ್ಯೂಬ್ ಸಂದಶರ್ನವೊಂದರಲ್ಲಿ ಭಾಗವಹಿಸಿದ್ದರು. ಆದರೆ ಹಾಡೊಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತನಿಷಾ ಅವರನ್ನು ಸಂದರ್ಶನ ಮಾಡಿದ ಯೂಟ್ಯೂಬರ್‌, 'ನೀವು ಬ್ಲೂಫಿಲಂನಲ್ಲಿ ಕಾಣಿಸಿಕೊಳ್ಳುತ್ತೀರಾ' ಎಂದು ಪ್ರಶ್ನಿಸಿದ್ದಾನೆ.




ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ತನಿಷಾ, ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ಬೆತ್ತಲೆ ಸಿನಿಮಾ ಮಾಡೋಕೆ ಆಗುತ್ತಾ? ಆ ರೀತಿ ಅಭಿನಯಿಸಲು ನಾನು ನೀಲಿಚಿತ್ರ ತಾರೆಯಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಕನ್ನಡ ಚಿತ್ರರಂಗದಲ್ಲಿ ಯಾವ ನಟಿಯೂ ನೀಲಿ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ' ಎಂದು ತಿರುಗೇಟು ನೀಡಿದ್ದಾರೆ.

ಯೂಟ್ಯೂಬ‌ರ್ ಈ ರೀತಿ ಪ್ರಶ್ನೆ ಕೇಳಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಟಿ ಸೇರಿದಂತೆ ಅನೇಕರು ಯೂಟ್ಯೂಬರ್‌ನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.




ಐದು ವಿಭಿನ್ನ ಕಥೆಗಳನ್ನು ಒಳಗೊಂಡ ಈ ಚಿತ್ರದಲ್ಲಿ ಬರುವ 5 ಕಥೆಗಳಿಗೆ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಹೀಗೆ ಐವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಮೈಸೂರು ಪಾಕ್, ಕಾಮಾತುರಾಣಾ ನಭಯಂ, ನಲಜ್ಜ, ದೋಣಿಸಾಗಲಿ, ಮಿಸ್ಟರ್ ಗೋಪಿ ಕೆಫೆ ಸೇರಿ ಐದು ಕಥೆಗಳಿರುವ ಈ ಸಿನಿಮಾದಲ್ಲಿ ಹಿರಿಯನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮುಂತಾದವರು ಅಭಿನಯಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article