ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ನೀಡಿದ ಅದ್ಭುತ ಆಫರ್...!- ಆಡಿಯೋ ವೈರಲ್

ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ನೀಡಿದ ಅದ್ಭುತ ಆಫರ್...!- ಆಡಿಯೋ ವೈರಲ್


 



ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ವಿ. ಸೋಮಣ್ಣ ತನ್ನ ಎದುರಾಳಿ ಜೆಡಿಎಸ್ ಅಭ್ಯರ್ಥಿಗೆ ಅದ್ಭುತ ಆಫರ್ ನೀಡಿದ್ದಾರೆ.


ಸರ್ಕಾರ ರಚನೆಯಾಗುತ್ತಿದ್ದಂತೆಯೇ ನಿಮಗೊಂದು ಗೂಟದ ಕಾರು ಕೊಡಿಸುತ್ತೇನೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ 50 ಲಕ್ಷ ರೂ. ಕೊಡುತ್ತೇನೆ ಎಂದು ಸೋಮಣ್ಣ ತಮ್ಮ ಎದುರಾಳಿ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಆಫರ್ ನೀಡಿದ್ದಾರೆ.


ದೂರವಾಣಿ ಮೂಲಕ ಮಾತನಾಡಿದ ಈ ಸಂಭಾಷಣೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಪ್ರಸಕ್ತ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿ ಒಳ ಒಪ್ಪಂದ ಮಾಡುವಂತೆ ಸೋಮಣ್ಣ ತಮ್ಮ ಎದುರಾಳಿಗೆ ಆಮಿಷ ಒಡ್ಡಿದ್ದಾರೆ. ಸೋಮಣ್ಣ ಅವರ ರಾಜಕೀಯ ತಂತ್ರಗಾರಿಕೆ ಈ ಮೂಲಕ ಬಯಲಾಗಿದೆ.