-->
ಅನಾರೋಗ್ಯವೆಂದು ಮಹಿಳೆಯ ಮನೆಗೆ ಹೋದ ವೈದ್ಯನಿಗೆ ಕಾದಿತ್ತು ಶಾಕ್...!

ಅನಾರೋಗ್ಯವೆಂದು ಮಹಿಳೆಯ ಮನೆಗೆ ಹೋದ ವೈದ್ಯನಿಗೆ ಕಾದಿತ್ತು ಶಾಕ್...!


ಕೊಚ್ಚಿ: ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಗೆ ಕೆಡವಿಹಾಕಿ 5 ಲಕ್ಷ ರೂ. ಹಣ ಸುಲಿಗೆ ಮಾಡಿದ್ದ ಆರೋಪದ ಮೇಲೆ ಖತರ್ನಾಕ್ ಮಹಿಳೆ ಮತ್ತು ಆಕೆಯ ಸಹಚರನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಗುಡಲೂರ್ ಮೂಲದ ನಾಸಿಮಾ ಹಾಗೂ ಆಕೆಯ ಸ್ನೇಹಿತ ಮುಹಮ್ಮದ್ ಆಮೀನ್ ಬಂಧಿತ ಆರೋಪಿಗಳು. 

ವಂಚಕಿ ನಾಸಿಮಾ ಚಿಕಿತ್ಸೆಗಾಗಿ ಮೊದಲ ಬಾರಿಗೆ ಈ ವೈದ್ಯರನ್ನು ಭೇಟಿಯಾಗಿದ್ದಾಳೆ. ಆ ಬಳಿಕ ತನಗೆ ಅನಾರೋಗ್ಯವಿದೆ ಎಂದು ಎಪ್ರಿಲ್ 5ರಂದು ಪಣಂಪಳ್ಳಿ ನಗರದಲ್ಲಿರುವ ತನ್ನ ಮನೆಗೆ ವೈದ್ಯರನ್ನು ಕರೆಸಿದ್ದಾಳೆ. ಈ ವೇಳೆ ಮೊಬೈಲ್‌ನಲ್ಲಿ ತೆಗೆದ ಖಾಸಗಿ ಚಿತ್ರಗಳನ್ನು ತೋರಿಸಿ ಬ್ಲಾಕ್‌ಮೇಲ್ ಮಾಡಿದ್ದಾಳೆ. ಮೊದಲು ವೈದ್ಯರ ಕಾರು ಹಾಗೂ 4 ಸಾವಿರ ರೂ. ಹಣವನ್ನು ಕಸಿದುಕೊಂಡಿದ್ದಾಳೆ.

ಮರುದಿನ ಕಾರನ್ನು ಹಿಂತಿರುಗಿಸಿದ ನಾಸೀಮಾ ಹಾಗೂ ಮುಹಮ್ಮದ್ ಆಮೀನ್ ಆತನಿಂದ 5 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಆ ಬಳಿಕತ್ತೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಾಗ ವೈದ್ಯರು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article