-->
ಮಂಗಳೂರು ಉತ್ತರದಲ್ಲಿ ಕೈ ಟಿಕೆಟ್ ಇನಾಯತ್ ಆಲಿಗೆ ಫೈನಲ್? ಬಾವಾಗೆ ಕೈಕೊಟ್ಟ ಕಾಂಗ್ರೆಸ್!

ಮಂಗಳೂರು ಉತ್ತರದಲ್ಲಿ ಕೈ ಟಿಕೆಟ್ ಇನಾಯತ್ ಆಲಿಗೆ ಫೈನಲ್? ಬಾವಾಗೆ ಕೈಕೊಟ್ಟ ಕಾಂಗ್ರೆಸ್!

ಮಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಇನಾಯತ್ ಆಲಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಾಲ್ಕು ಪಟ್ಟಿ ಹೊರಬಂದರು ಮಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿಯ ಘೋಷಣೆಯನ್ನು ಮಾಡಲಾಗಿರಲಿಲ್ಲ. ಮಂಗಳೂರು ಉತ್ತರ ಕ್ಷೇತ್ರಕ್ಕೆ ಮಾಜಿ ಶಾಸಕ ಮೊಯ್ದಿನ ಭಾವ ಮತ್ತು ಉದ್ಯಮಿ ಇನಾಯತ್ ಆಲಿ ಅವರು ಪ್ರಬಲ ಪೈಪೋಟಿಯನ್ನು ನಡೆಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ಇಬ್ಬರು ಆಕಾಂಕ್ಷಿಗಳು ಬಾರಿ ಪ್ರಭಾವವನ್ನು ಬಳಸಿ ಟಿಕೆಟಿಗಾಗಿ ಪೈಪೋಟಿಯನ್ನು ನಡೆಸಿದರು.

ಈ ನಡುವೆ ಮೊಯ್ದಿನ್ ಭಾವ ಅವರಿಗೆ ಟಿಕೆಟ್ ಖಚಿತವಾಗಿದೆ ಎಂದು ಸುದ್ದಿಗಳು ಹರಡಿತ್ತು. ಅದೇ ಹೊತ್ತಿನಲ್ಲಿ ಮತ್ತೊಂದೆಡೆ ಇನಾಯತ್ ಆಲಿ ಅವರಿಗೂ ಟಿಕೆಟ್ ಖಚಿತವಾಗಿದೆ ಎಂಬ ಸುದ್ದಿಗಳು ಹರಡಿದ್ದವು. ಇದೀಗ ಹೈಕಮಾಂಡ್ ಇನಾಯತ್ ಆಲಿ ಅವರಿಗೆ ಫೈನಲ್ ಮಾಡಿದೆ ಎಂದು ತಿಳಿದುಬಂದಿದೆ.

ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನಾಂಕವಾಗಿದ್ದು ಇಂದು ಸಂಜೆಯ ವೇಳೆ ಕಾಂಗ್ರೆಸ್ ತನ್ನ ಎಲ್ಲಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಇನಾಯತ್ ಆಲಿ ಅವರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಬಲಿಗರ ಸಭೆ ಕರೆದ ಬಾವ

ಇನ್ನೂ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಮಾಜಿ ಶಾಸಕ ಮೊಯ್ದಿನ್‌ ಬಾವ ಅವರು ಬೆಂಬಲಿಗರ ಸಭೆ ಕರೆದಿದ್ದಾರೆ. ಇಂದು ಸಂಜೆ ಕೃಷ್ಣಾಪುರ ಪರಿಸರದಲ್ಲಿ ಬೆಂಬಲಿಗರ ಸಭೆ ಕರೆದು ಮುಂದಿನ ನಡೆಯ ಬಗ್ಗೆ ‌ನಿರ್ಧರಿಸಲಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article