ಕಾಂಗ್ರೆಸ್ ಟಿಕೆಟ್- ಮಂಗಳೂರು ದಕ್ಷಿಣ ಲೋಬೋ, ಪುತ್ತೂರು ಅಶೋಕ್ ರೈ- ಮಂಗಳೂರು ಉತ್ತರ ಯಾರು?

ಮಂಗಳೂರು:  ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ 3 ನೇ ಪಟ್ಟಿ ಬಿಡುಗಡೆಗೊಳಿಸಿದೆ.

ಮಂಗಳೂರು ದಕ್ಷಿಣ ಮತ್ತು ಪುತ್ತೂರು ಕ್ಷೇತ್ರ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದ್ದು, ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಇನ್ನೂ ಫೈನಲ್ ಮಾಡಿಲ್ಲ

ಮಂಗಳೂರು ದಕ್ಷಿಣ ಕ್ಕೆ ಜೆ ಆರ್ ಲೋಬೋ

ಮಂಗಳೂರು ದಕ್ಷಿಣಕ್ಕೆ ಮಾಜಿ ಶಾಸಕ ಜೆ ಆರ್ ಲೋಬ಼ೊ ಅವರನ್ನು ಅಂತಿಮಗೊಳಿಸಲಾಗಿದೆ. ಜೆ ಆರ್ ಲೋಬೋ ಅವರು 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯ ಸಾಧಿಸಿದ್ದರು.2018 ರಲ್ಲಿ  ಅವರು ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಎದುರು ಸೋಲನ್ನು ಅನುಭವಿಸಿದ್ದರು. ಈ ಬಾರಿಯು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಕ್ಷೇತ್ರದ ಮೇಲೆ ಐವನ್ ಡಿಸೋಜ, ಪದ್ಮರಾಜ್, ಶಶಿಧರ್ ಹೆಗ್ಡೆ ಸೇರಿದಂತೆ ಹಲವರು ಕಣ್ಣಿಟ್ಟಿದ್ದರು.

ಪುತ್ತೂರಿನಲ್ಲಿ ಅಶೋಕ್ ರೈ

ಪುತ್ತೂರು ಕ್ಷೇತ್ರದಲ್ಲಿ ಅಶೋಕ್ ರೈಗೆ ಟಿಕೆಟ್ ಘೋಷಿಸಲಾಗಿದೆ. ಮಾಜಿ ಬಿಜೆಪಿ ನಾಯಕನಿಗೆ ಟಿಕೆಟ್ ಘೋಷಿಸಲಾಗಿದೆ. ಅಶೋಕ್ ರೈ ಬಿಜೆಪಿಯಲ್ಲಿ 2018 ರಲ್ಲಿ ಚುನಾವಣಾ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರು.ಆದರೆ ಅವರ ಬದಲಿಗೆ ಸಂಜೀವ ಮಠಂದೂರು ಗೆ ನೀಡಲಾಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಅವರು ಪ್ರಜಾ ಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.