-->
1000938341
CM ಬೊಮ್ಮಾಯಿ ಟೆಂಪಲ್ ರನ್- ಮಂಗಳೂರಿನ ಮಂಗಳಾದೇವಿ, ಗರೋಡಿ ಕ್ಷೇತ್ರಕ್ಕೆ ಭೇಟಿ

CM ಬೊಮ್ಮಾಯಿ ಟೆಂಪಲ್ ರನ್- ಮಂಗಳೂರಿನ ಮಂಗಳಾದೇವಿ, ಗರೋಡಿ ಕ್ಷೇತ್ರಕ್ಕೆ ಭೇಟಿ


ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಬೆನ್ನಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಾವಳಿ ಜಿಲ್ಲೆಯಲ್ಲಿ ಟೆಂಪಲ್ ರನ್ ನಡೆಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ( ಬುಧವಾರ) ಮತ್ತು ನಾಳೆ ( ಗುರುವಾರ) ಕರಾವಳಿಯ ದೇವಸ್ಥಾನಗಳ ಭೇಟಿ ಕಾರ್ಯಕ್ರಮ ಇರಿಸಿದ್ದಾರೆ. ಇಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಆ ಬಳಿಕ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಆ ಬಳಿಕ ನಗರಕ್ಕೆ  ಬಂದ ಅವರು ನಗರದಲ್ಲಿ ಇರುವ ಮಂಗಳಾದೇವಿ ದೇವಸ್ಥಾನ‌ ಮತ್ತು ಗರೋಡಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.  ನಗರದ ಮಂಗಳಾದೇವಿ ಮತ್ತು ಗರೋಡಿ ಕ್ಷೇತ್ರ ಭೇಟಿ ವೇಳೆ ಶಾಸಕ , ಬಿಜೆಪಿ ಪಕ್ಷದ ಮಂಗಳೂರು ದಕ್ಷಿಣ ಅಭ್ಯರ್ಥಿ ವೇದವ್ಯಾಸ ಕಾಮತ್,  ಸಚಿವ ಕೋಟ ಶ್ರೀನಿವಾಸ ಪೂಜಾರಿ ಜೊತೆಗಿದ್ದರು.

ಇಂದು ರಾತ್ರಿ ನಗರದಲ್ಲಿ ವಾಸ್ತವ್ಯ ಮಾಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಬೆಳಿಗ್ಗೆ ಉಡುಪಿ ಜಿಲ್ಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಭೇಟಿ ಮಾಡಲಿದ್ದಾರೆ. ಆ ಬಳಿಕ  ನಗರಕ್ಕೆ ಬಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಸೋಮೇಶ್ವರದ ಸೋಮನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ‌.

Ads on article

Advertise in articles 1

advertising articles 2

Advertise under the article