ಮಂಗಳೂರು; ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು ಓಲ್ಡ್ ಕಂಕನಾಡಿ ಬೈಪಾಸ್ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯಾಗಿ ಆದೇಶಿಸಿದ್ದಾರೆ.
ಈ ಕಾರಣದಿಂದ ಇನ್ನೂ ಮುಂದೆ ವಾಹನ ಸವಾರರು ಈ ಕೆಳಗಿನಂತೆ ವಾಹನ ಸಂಚಾರ ಮಾಡಬೇಕಿದೆ.
ಕಂಕನಾಡಿ ವೃತ್ತದಿಂದ ಪಂಪ್‌ವಲ್ ಕಡೆಗೆ ಓಲ್ಡ್ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ,
ಫಳ್ನೀರ್ (ಮದರ್ ಥೆರಸಾ ರಸ್ತೆ) ರಸ್ತೆಯಿಂದ ಪಂಪ್‌ವಲ್ ಕಡೆಗೆ ಹೋಗುವ ಎಲ್ಲಾ ತರಹದ ವಾಹನಗಳು ಕಂಕನಾಡಿ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿ ಕರಾವಳಿ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಪಂಪ್‌ವಲ್ ಕಡೆಗೆ ಸಂಚರಿಸುವುದು.
ಮಂಗಳಾದೇವಿ, ವೆಲೆನ್ಸಿಯಾ ಕಡೆಯಿಂದ ಪಂಪ್ ವೆಲ್ ಕಡೆಗೆ ಹೋಗುವ ಎಲ್ಲಾ ತರಹದ ವಾಹನಗಳು ಕಂಕನಾಡಿ ಜಂಕ್ಷನ್‌ನಲ್ಲಿ ನೇರವಾಗಿ ಕರಾವಳಿ ಜಂಕ್ಷನ್ ಕಡೆಗೆ ಸಂಚರಿಸಿ ಕರಾವಳಿ ಜಂಕ್ಷನ್ ನಲ್ಲಿ ತಿರುಗಿ ಪಂಪ್‌ವೆಲ್ ಕಡೆಗೆ ಸಂಚರಿಸುವುದು