-->
1000938341
ಗುಡಿಸಿಲಿನಲ್ಲಿ ಮಲಗಿದ ಒಂದೇ ಮನೆಯ ಐವರು ಸಜೀವ ದಹನ

ಗುಡಿಸಿಲಿನಲ್ಲಿ ಮಲಗಿದ ಒಂದೇ ಮನೆಯ ಐವರು ಸಜೀವ ದಹನ


ಉತ್ತರಪ್ರದೇಶ: ಗುಡಿಸಲಿನಲ್ಲಿ ನಡೆದ ಅಗ್ನಿ ಅವಘಡದಲ್ಲಿ  ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮಲಗಿದ್ದಲ್ಲಿಯೇ ಸಜೀವ ದಹನಗೊಂಡ ಘಟನೆ ಉತ್ತರ ಪ್ರದೇಶದ ಕಾನ್ಸುರ ದೇಹತ್‌ನಲ್ಲಿ ನಡೆದಿದೆ.

ರೂರಾ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಮ್ ಬಂಜಾರದೇರಾ ಗ್ರಾಮದಲ್ಲಿ ನಡೆದ ಈ ದುರ್ಘಟನೆಯಲ್ಲಿ ಸತೀಶ್ ಕುಮಾರ್, ಅವರ ಪತ್ನಿ ಕಾಜಲ್ ಹಾಗೂ ಮೂವರು ಮಕ್ಕಳು ಮಲಗಿದ್ದಲ್ಲಿಯೇ ಸಜೀವವಾಗಿ ದಹನಗೊಂಡ ದುರ್ದೈವಿಗಳು. ಇವರು ಮಲಗಿದ್ದ ಸಂದರ್ಭ ಗುಡಿಸಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದೌಢಾಯಿಸಿದ್ದು ಕಾರ್ಯಾಚರಣೆ ನಡೆಸಿದರೂ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಬೆಂಕಿ ನಂದಿಸಲು ಯತ್ನಿಸಿದ ಸತೀಶ್ ಅವರ ತಾಯಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಎಲ್ಲರೂ ಸಜೀವದಹನವಾಗಿದ್ದಾರೆ.  ವಿಧಿವಿಜ್ಞಾನ ತಂಡ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಶ್ವಾನ ದಳದ ತಂಡವನ್ನು ಸ್ಥಳಕ್ಕೆ ಆಗಮಿಸಿದೆ. ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಕಾಸ್ಪುರ ದೇಹತ್ ಎಸ್ಪಿ ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article