-->
10ರ ನೋಟು ಎಣಿಸಲು ಸಾಧ್ಯವಾಗದೆ ಪೀಕಲಾಟಕ್ಕೆ ಸಿಲುಕಿದ ವರ: ಮದುವೆಯನ್ನೇ ಮುರಿದ ವಧು

10ರ ನೋಟು ಎಣಿಸಲು ಸಾಧ್ಯವಾಗದೆ ಪೀಕಲಾಟಕ್ಕೆ ಸಿಲುಕಿದ ವರ: ಮದುವೆಯನ್ನೇ ಮುರಿದ ವಧು


ಲಕ್ನೋ: ವರನಿಗೆ ಹಣ ಎಣಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಧು ಮದುವೆಯನ್ನೇ ಮುರಿದ ಪ್ರಕರಣವೊಂದು ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ತಾಳಿ ಕಟ್ಟುವ ಶಾಸ್ತ್ರ ಮಾಡುವ ಸಂದರ್ಭ ವರನ ವರ್ತನೆಯಿಂದ ಅರ್ಚಕರಿಗೆ ಸಂಶಯ ಬಂದಿದೆ. ಈ ವಿಚಾರವನ್ನು ಅರ್ಚಕರು ವಧುವಿನ ಮನೆಯವರಿಗೆ ತಿಳಿಸಿದ್ದಾರೆ. ಆದ್ದರಿಂದ ವಧುವಿನ ಮನೆಯವರು ವರನಿಗೆ ಪರೀಕ್ಷೆಯೊಂದನ್ನು ಏರ್ಪಡಿಸುವುದಾಗಿ ಹೇಳಿದ್ದಾರೆ. ಇದಕ್ಕೆ ವರನ ಕಡೆಯವರು ಒಪ್ಪಿಕೊಂಡಿದ್ದು, ವರನಿಗೆ 10 ರೂ.ಗಳ 30 ನೋಟುಗಳನ್ನು ಎಣಿಸುವಂತೆ ಕೊಟ್ಟಿದ್ದಾರೆ. ಈ ವೇಳೆ ವರನಿಗೆ ಹಣ ಎಣಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ವರ ಮಾನಸಿಕ ಅಸ್ವಸ್ಥ ಎಂಬುದು ಈ ವೇಳೆ ಬಹಿರಂಗಗೊಂಡಿದೆ.

ವರ ಮಾನಸಿಕ ಅಸ್ವಸ್ಥನೆಂಬುದನ್ನು ವಧುವಿನ ಕಡೆಯವರಿಗೆ ಹೇಳದೆ ವರನ ಕಡೆಯವರು ಮುಚ್ಚಿಟ್ಟಿದ್ದಾರೆ. ಹೀಗಾಗಿ ಕೋಪಗೊಂಡ ವಧು ತಕ್ಷಣವೇ ಮದುವೆ ಮಂಟಪದಿಂದ ಹೊರನಡೆದಿದ್ದಾಳೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ವಾಗ್ವಾದ ಉಂಟಾಗಿದೆ. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳೀಯ ಪೊಲೀಸರನ್ನು ಕರೆಸಲಾಯಿತು.

ವರನ ಕುಟುಂಬ ಆತನ ಮಾನಸಿಕ ಅಸ್ವಸ್ಥತೆಯನ್ನು ಮರೆಮಾಚಿದೆ ಮದುವೆ ಮಾಡಲು ಯತ್ನಿಸಿದೆ ಎಂದು ವಧುವಿನ ಕುಟುಂಬದವರು ಆರೋಪಿಸಿದೆ. ಅಲ್ಲದೆ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಹೀಗಾಗಿ ಮದುವೆಯೇ ಕ್ಯಾನ್ಸಲ್ ಆಗಿದೆ. ವರ ಬ್ರೋಕರ್ ನ ಹತ್ತಿರದ ಸಂಬಂಧಿಯಾಗಿದ್ದರು. ಹಾಗಾಗಿ ಆತನನ್ನು ನಂಬಿ ನಾವು ಸರಿಯಾಗಿ ಆತನನ್ನು ಭೇಟಿಯಾಗಿರಲಿಲ್ಲ. ಆದರೆ ಮದುವೆ ದಿನ ಅರ್ಚಕರು, ವರನ ವಿಚಿತ್ರ ವರ್ತನೆಯ ಬಗ್ಗೆ ನಮಗೆ ತಿಳಿಸಿದಾಗ ವಿಚಾರ ಬೆಳಕಿಗೆ ಬಂತು. ಆದ್ದರಿಂದ ನನ್ನ ಸಹೋದರಿ ಆತನನ್ನು ಮದುವೆಯಾಗಲು ನಿರಾಕರಿಸಿದಳು ಎಂದು ತಿಳಿಸಿದರು.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article