-->
1000938341
ಸುರತ್ಕಲ್: ಶಾಲಾ ಬಾಲಕ ನೇಣಿಗೆ ಶರಣು - ಕಾರಣ ನಿಗೂಢ

ಸುರತ್ಕಲ್: ಶಾಲಾ ಬಾಲಕ ನೇಣಿಗೆ ಶರಣು - ಕಾರಣ ನಿಗೂಢ


ಸುರತ್ಕಲ್‌: ಇಲ್ಲಿಗೆ ಸಮೀಪದ ಕೃಷ್ಣಾಪುರ ಎಂಬಲ್ಲಿನ ಖಾಸಗಿ ಶಾಲಾ ವಿದ್ಯಾರ್ಥಿಯೋರ್ವನು ನೇಣಿಗೆ ಶರಣಾದ ಘಟನೆ ರವಿವಾರ ಮುಂಜಾನೆ ನಡೆದಿದೆ.

ಕಾಟಿಪಳ್ಳ ನಿವಾಸಿ ಹರ್ಷಿತ್‌ (13) ಮೃತಪಟ್ಟ ವಿದ್ಯಾರ್ಥಿ. ಹರ್ಷಿತ್ ವಾರಾಂತ್ಯದಲ್ಲಿ ಸೂರಿಂಜೆಯಲ್ಲಿರುವ ತನ್ನ ತಾತನ ಮನೆಗೆ ಹೋಗುವುದು ವಾಡಿಕೆ. ಈ ಬಾರಿಯೂ ಶಾಲೆ ಮುಗಿಸಿ ಶನಿವಾರ ತೆರಳಿದ್ದ ಹರ್ಷಿತ್‌ ರವಿವಾರ ತನ್ನ ತಾತನ ಮನೆಯಲ್ಲಿ ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅನಿರೀಕ್ಷಿತವಾಗಿ ಯಾವುದೋ ಕಾರಣಕ್ಕೆ ಮನನೊಂದು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಈತನ ತಂದೆ ಸುಧಾಕರ ದೇವಾಡಿಗ ಸುರತ್ಕಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.Ads on article

Advertise in articles 1

advertising articles 2

Advertise under the article