-->
Subrahmanya:- ಕುಕ್ಕೆ ಸುಬ್ರಮಣ್ಯ ದೇವರ ದರುಶನ ಪಡೆದ ಕರ್ನಾಟಕ ರಾಜ್ಯಪಾಲರು.

Subrahmanya:- ಕುಕ್ಕೆ ಸುಬ್ರಮಣ್ಯ ದೇವರ ದರುಶನ ಪಡೆದ ಕರ್ನಾಟಕ ರಾಜ್ಯಪಾಲರು.

ಸುಬ್ರಹ್ಮಣ್ಯ

ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗಹ್ಲೋಟ್ ಅವರು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಥಾವರ್ ಚಂದ್ ಗೆಹ್ಲೋಟ್ ಪತ್ನಿ ಅನಿತಾ ಗೆಹ್ಲೋಟ್ ಹಾಗೂ ಕುಟುಂಬಸ್ಥರೊಂದಿಗೆ ಫೆ.14ರಂದು ಸಂಜೆ ಸುಮಾರು 6.00 ಗಂಟೆಗೆ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರುಶನ ಪಡೆದರು.

ಈ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್, ಸಿಇಓ ಕುಮಾರ್, ಜಿಲ್ಲಾ ಎಸ್ಪಿ ಡಾ.ವಿಕ್ರಮ್ ಆಮ್ಟೇ, ಸುಬ್ರಹ್ಮಣ್ಯ ಕಾರ್ಯನಿರ್ವಣಾ ಅಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಸೇರಿ ಪ್ರಮುಖರು ಉಪಸ್ಥಿತರಿದ್ದರು,

ಪೊಲೀಸ್ ಇಲಾಖೆಯಿಂದ ರಾಜ್ಯಪಾಲಾರಿಗೆ ಎಲ್ಲಾ ರೀತಿಯ ಭದ್ರತೆಯನ್ನು ಕೈಗೊಳ್ಳಲಾಗಿತ್ತು , ಸುಮಾರು 2 ಗಂಟೆಗಳ ಕಾಲ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ, ರಾಜ್ಯಪಾಲರು ದರ್ಶನ ಪಡೆದು ಮರಳಿದ ಬಳಿಕ ಎಂದಿನಂತೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article