-->
ಪತ್ನಿಗೆ ತಿಳಿಯದಂತೆ ಎರಡನೇ ವಿವಾಹವಾಗಿ ಫಜೀತಿಗೆ ಸಿಲುಕಿಕೊಂಡ ಪತಿ: ರಣರಂಗವಾಯ್ತು ಎರಡನೇ ಪತ್ನಿ ಸೀಮಂತ

ಪತ್ನಿಗೆ ತಿಳಿಯದಂತೆ ಎರಡನೇ ವಿವಾಹವಾಗಿ ಫಜೀತಿಗೆ ಸಿಲುಕಿಕೊಂಡ ಪತಿ: ರಣರಂಗವಾಯ್ತು ಎರಡನೇ ಪತ್ನಿ ಸೀಮಂತ


ಬೆಂಗಳೂರು: ಇಲ್ಲೊಬ್ಬ ತನ್ನ ಮೊದಲ ಪತ್ನಿಯ ಕಣ್ತಪ್ಪಿಸಿ ಎರಡನೇ ವಿವಾಹವಾಗಿದ್ದಾನೆ. ಇದೀಗ ಎರಡನೇ ಪತ್ಮಿಯ ಸೀಮಂತದ ದಿನವೇ ಮೊದಲ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಬಂದು ಪ್ರಶ್ನಿಸಿದ್ದಾರೆ. ಪರಿಣಾಮ ಚಂದ್ರಲೇಔಟ್‌ನಲ್ಲಿ ನಡೆಯುತ್ತಿದ್ದ ಸೀಮಂತ ಕಾರ್ಯಕ್ರಮದಲ್ಲಿ ಮಾರಾಮಾರಿ ನಡೆದು, ಸೀಮಂತದ ಮನೆ ರಣರಂಗವಾಗಿ ಬದಲಾಗಿದೆ.

ತೇಜಸ್ ಎಂಬಾತ 2008ರಲ್ಲಿ ಚೈತ್ರಾ ಎಂಬಾಕೆಯನ್ನು ವಿವಾಹವಾಗಿದ್ದ. ಬಳಿಕ ತೇಜಸ್ ಮೊದಲ ಪತ್ನಿಗೆ ಗೊತ್ತಾಗದಂತೆ, ಎರಡನೇ ವಿವಾಹವಾಗಿದ್ದಾನೆ. ಇದೀಗ ಎರಡನೇ ಪತ್ನಿಗೆ ಸೀಮಂತ ನಡೆಯುತ್ತಿರುವ ವಿಚಾರ ತಿಳಿದು, ಮೊದಲ ಪತ್ನಿ ಚೈತ್ರ ಮತ್ತು ಆಕೆಯ ಕುಟುಂಬಸ್ಥರು ಪ್ರಶ್ನಿಸಲು ಹೋಗಿದ್ದಾರೆ.

ಪತಿಯ ಎರಡನೇ ಮದುವೆ ವಿಚಾರ ತಿಳಿದು ಮಹಿಳಾ ಸಂಘಟನೆಯೊಂದಿಗೆ ಚೈತ್ರಾ ಹಾಗೂ ಆಕೆಯ ಕುಟುಂಬ ಸೀಮಂತ ಕಾರ್ಯ ನಡೆಯುತ್ತಿದ್ದಲ್ಲಿಗೆ ಹೋಗಿ ಪ್ರಶ್ನಿಸಿದ್ದಾರಂತೆ. ಈ ವೇಳೆ ಸ್ಥಳದಲ್ಲಿ ವಾಗ್ವಾದ ನಡೆದು, ಮಾರಾಮಾರಿಯೇ ನಡೆದಿದೆ ಎನ್ನಲಾಗಿದೆ.

ತೇಜಸ್ ವಿವಾಹದ ಬಳಿಕ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಈ ಹಿಂದೆ ಪತ್ನಿ ಚೈತ್ರಾಳಿಗೆ ತೇಜಸ್ ಹಲ್ಲೆ ಮಾಡಿದ್ದ. ಬಳಿಕ ಇವರಿಬ್ಬರು ವಿಚ್ಛೇದನಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ತೇಜಸ್ ಎರಡನೇ ಮದುವೆ ಆಗಿದ್ದಾನೆ ಎನ್ನಲಾಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article