"ಪಠಾಣ್" ಸಿನಿಮಾ ಇಷ್ಟವಾಗಲಿಲ್ಲ ಎಂಬ ಮಗುವಿಗೆ ಶಾರುಖ್ ಖಾನ್ ನೀಡಿದ ಉತ್ತರವೇನು ಗೊತ್ತೇ?
Monday, February 6, 2023
ನವದೆಹಲಿ: ಐದು ವರ್ಷಗಳ ಸುದೀರ್ಘ ವಿರಾಮದ ಬಳಿಕ “ಪಠಾಣ್” ಸಿನಿಮಾದ ಮೂಲಕ ಬೆಳ್ಳಿತೆರೆಯ ಮೇಲೆ ಶಾರುಖ್ ಖಾನ್ ಅಬ್ಬರಿಸುತ್ತಿದ್ದಾರೆ. ಸಾಲು ಸಾಲು ಸೋಲುಗಳನ್ನು ಕಂಡ ಅವರು ಇದೀಗ ಮತ್ತೆ ಗೆಲುವಿನ ಪತಾಕೆ ಹಾರಿಸುತ್ತಿದ್ದಾರೆ. "ಪಠಾಣ್" ವಿಶ್ವದಾದ್ಯಂತ ಬರೋಬ್ಬರಿ 700 ಕೋಟಿ ರೂ. ಗೂ ಅಧಿಕ ಹಣ ಗಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದೆ.
ಸಿನಿಮಾ ನೋಡಿದ ಪ್ರತಿಯೊಬ್ಬರು ಶಾರುಖ್ ಅಭಿನಯಕ್ಕೆ ಮನಸೋತಿದ್ದಾರೆ. ಈ ವಯಸ್ಸಿನಲ್ಲೂ ಹುರಿಯಾದ ಸದೃಢ ದೇಹವನ್ನು ಶಾರುಖ್ ನಿರ್ವಹಿಸುವ ರೀತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲೊಂದು ಮಗು ಅಹನಾಗೆ ಪಠಾಣ್ ಸಿನಿಮಾ ಇಷ್ಟ ಆಗಿಲ್ಲವಂತೆ. ಮಗುವಿನ ಹೇಳಿಕೆಗೆ ಮನಸೋತಿರುವ ಶಾರುಖ್ ಮಗುವಿನಷ್ಟೇ ಮುದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಅಭಿಷೇಕ್ ಕುಮಾರ್ ಎಂಬುವರು ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಆಹಾನ ಎಂಬ ಪುಟ್ಟ ಮಗುವಿಗೆ ಯಾರೋ ಒಬ್ಬರು 'ಆಹನಾ ಯಾವ ಸಿನಿಮಾ ನೋಡಿದೆ' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರ ನೀಡುವ ಆಹಾನಾ 'ಪಠಾಣ್' ಎಂದು ಹೇಳುತ್ತಾಳೆ. ಬಳಿಕ 'ನಿನಗೆ ಆ ಸಿನಿಮಾ ಇಷ್ಟವಾಯಿತಾ?' ಎಂದು ಪ್ರಶ್ನಿಸಲಾಗುತ್ತದೆ. ಇದಕ್ಕೆ 'ಇಷ್ಟ ಆಗಲಿಲ್ಲ' ಎನ್ನುವ ಆಹಾನಾ, ಯಾಕೆ ಇಷ್ಟ ಆಗಲಿಲ್ಲ ಎಂಬ ಕಾರಣವನ್ನು ತಿಳಿಸದೇ ಸುಮ್ಮನೇ ನಗೆಯ ಬೀರುತ್ತಾಳೆ.
ಅಭಿಷೇಕ್ ಕುಮಾರ್ ಪೋಸ್ಟ್ ಮಾಡಿರುವ ವಿಡಿಯೋವನ್ನು ಶೇರ್ ಮಾಡಿರುವ ಬಹಳ ಸುಂದರವಾದ ಶಾರುಖ್ ಪ್ರತಿಕ್ರಿಯೆ ನೀಡಿದ್ದಾರೆ. 'ಓಹೋ.. ಹಾಗಾದರೆ ನಾನು ಇನ್ನಷ್ಟು ಕಷ್ಟಪ್ಪಟ್ಟು ಕೆಲಸ ನಿರ್ವಹಿಸಬೇಕಿದೆ. ಡ್ರಾಯಿಂಗ್ ಬೋರ್ಡ್‌ಗೆ ಮತ್ತೆ ಹಿಂತಿರುಗಬೇಕಿದೆ. ಯುವ ಪ್ರೇಕ್ಷಕರು ನಿರಾಶೆಗೊಳ್ಳಲು ನಾನು ಬಿಡುವುದಿಲ್ಲ. ದಯವಿಟ್ಟು ಒಮ್ಮೆ ಅವಳಿಗೆ ಡಿಡಿಎಲ್‌ಜೆ ಸಿನಿಮಾ ತೋರಿಸಿ, ಬಹುಶಃ ಆಕೆ ರೊಮ್ಯಾಂಟಿಕ್ ಅನ್ಸುತ್ತೆ' ಎಂದು ಶಾರುಖ್ ಟ್ವಿಟ್ ಮಾಡಿದ್ದಾರೆ.
ಶಾರುಖ್ ಟ್ವಿಟ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶಾರುಖ್ ಖಾನ್ ಅಕ್ಷರಶಃ ಪ್ರತಿ ಟ್ಯಾಗ್ ಅನ್ನು ಓದುತ್ತಾರೆ. ಈ ಮನುಷ್ಯ ಎಂದಿಗೂ ಬದಲಾಗಿಲ್ಲ. ಬದಲಾಯಿಸಿದರೆ ಅವರು ಇನ್ನೂ ಉತ್ತಮವಾಗಿ ಬದಲಾಗುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.