ಪೋರ್ನ್ ವೀಡಿಯೋ ವೀಕ್ಷಿಸುತ್ತಿರುವಾಗಲೇ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ: ಮುಂದಾಗಿದ್ದು ಘೋರ ದುರಂತ
Thursday, February 23, 2023
ಸೂರತ್: ಪೋರ್ನ್ ವೀಡಿಯೋ ವೀಕ್ಷಿಸುತ್ತಿದ್ದ ಪತಿಯನ್ನು ತರಾಟೆಗೆ ತೆಗೆದುಕೊಂಡ ವಿಚಾರದಲ್ಲಿ ಮುಂದುವರಿದ ಕಲಹವೊಂದು ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಗುಜರಾತ್ ನ ಸೂರತ್‌ನಲ್ಲಿ ನಡೆದಿದೆ.
ಕತರ್‌ಗಮ್ ಮೂಲದ ಕಿಶೋರ್ ಪಟೇಲ್ (33) ಎಂಬಾತ ಕೊಲೆ ಆರೋಪಿ ಕಾಜಲ್ (30) ಎಂಬಾಕೆಯೇ ಹತ್ಯೆಯಾದ ದುರ್ದೈವಿ ಪತ್ನಿ.
ಭಾನುವಾರ ರಾತ್ರಿ ವೇಳೆ ಕಿಶೋರ್ ತನ್ನ ಮೊಬೈಲ್‌ನಲ್ಲಿ ಪೋರ್ನ್ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ. ಇದನ್ನು ಗಮನಿಸಿದ ಪತ್ನಿ ಅಂತಹ ವೀಡಿಯೋಗಳನ್ನು ನೋಡುವುದನ್ನು ನಿಲ್ಲಿಸು ಎಂದು ಎಚ್ಚರಿಸಿದ್ದಾಳೆ. ಆದರೆ, ಪತ್ನಿಯ ಮಾತಿಗೆ ಕ್ಯಾರೆ ಎನ್ನದೆ ಕಿಶೋರ್ ಮತ್ತೆ ಪೋರ್ನ್ ವಿಡಿಯೋಗಳನ್ನು ನೋಡುವುದನ್ನು ಮುಂದುವರಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಜಗಳವು ಮುಂದುವರಿದು ಸೋಮವಾರವು ಮತ್ತೆ ದಂಪತಿ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿ, ತಾಳ್ಮೆ ಕಳೆದುಕೊಂಡ ಕಿಶೋರ್, ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಶೇ. 40 ಸುಟ್ಟ ಗಾಯಗಳಿಂದ ಮಂಗಳವಾರ ಬೆಳಗ್ಗೆ ಕಾಜಲ್ ಕೊನೆಯುಸಿರೆಳೆದಿದ್ದಾಳೆ. ಸಾವಿಗೂ ಮುನ್ನ ಪೊಲೀಸರ ಮುಂದೆ ಕಾಜಲ್ ಹೇಳಿಕೆ ನೀಡಿದ್ದು, ಅದರ ಆಧಾರದನ್ವಯ ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.