-->

ಮೊದಲ ರಾತ್ರಿಯ ಖಾಸಗಿ ವೀಡಿಯೋವನ್ನು ಹಂಚಿಕೊಂಡ ದಂಪತಿ: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಮೊದಲ ರಾತ್ರಿಯ ಖಾಸಗಿ ವೀಡಿಯೋವನ್ನು ಹಂಚಿಕೊಂಡ ದಂಪತಿ: ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನೆಟ್ಟಿಗರು


ನವದೆಹಲಿ: ಎಲ್ಲರಿಗೂ ಅವರದ್ದೇ ಆದ ಖಾಸಗಿ ಜೀವನ ಎಂಬುದಿದೆ. ಬೇರೆಯವರು ಅಲ್ಲಿ ಇಣುಕಿ ನೋಡುವುದನ್ನು ಯಾರೂ ಬಯಸುವುದಿಲ್ಲ. ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವುದು ಕೂಡ ಕಾನೂನಿನ ಪ್ರಕಾರ ಅಪರಾಧ. ಆದರೆ, ಇತ್ತಿಚೆಗೆ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಎಲ್ಲವೂ ಸಾಮಾನ್ಯವಾಗಿದೆ. ಈ ಮೂಲಕ ಕೆಲವರು ತಮ್ಮ ಖಾಸಗಿತನಕ್ಕೆ ತಾವೇ ಧಕ್ಕೆ ತಂದುಕೊಂಡರೆ ಅಂಥರಿಗೆ ಏನನ್ನಬೇಕೋ?


ಮದುವೆಯ, ಪ್ರಥಮ ರಾತ್ರಿ ಎಂಬದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಕ್ಷಣ. ಅದನ್ನು ಕೊನೆಯವರೆಗೂ ನೆನಪಿನಲ್ಲಿ ಉಳಿಯವಂತೆ ಮಾಡಲು ವಿಭಿನ್ನವಾಗಿ ಆಚರಣೆ ಮಾಡಲು ಇಷ್ಟಪಡುತ್ತಾರೆ. ಈ ಬಗ್ಗೆ ಬಹಳಷ್ಟು ಕನಸು, ಕಾತರಗಳು ಎಲ್ಲರಲ್ಲೂ ಇರುತ್ತದೆ. ಆದರೆ, ಇಲ್ಲೊಂದು ಜೋಡಿ ತಮ್ಮ ಮೊದಲ ರಾತ್ರಿಯ ವೀಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರಿಂದ ನೆಟ್ಟಿಗರು ಹುಬ್ಬೇರಿಸಿದಲ್ಲದೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.


ಆರುಶಿ ರಾಹುಲ್ ಅಫಿಶಿಯಲ್ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದಂಪತಿಯ ಮೊದಲ ರಾತ್ರಿಯ ವೀಡಿಯೋ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ನವವಿವಾಹಿತ ದಂಪತಿ, ತಮ್ಮ ಮೊದಲ ರಾತ್ರಿಯ ಖಾಸಗಿ ಕೋಣೆಯಲ್ಲಿರುವುದನ್ನು ಕಾಣಬಹುದು. ಇಬ್ಬರು ಸಹ ಮದುವೆ ಉಡುಗೆಯನ್ನು ಧರಿಸಿದ್ದಾರೆ. ವಧು ಆಭರಣಗಳನ್ನು ಬಿಚ್ಚುತ್ತಿರುವುದು ಮತ್ತು ಆಕೆಯ ಪತಿ ಆಭರಣಗಳನ್ನು ಹಾಗೂ ಬಟ್ಟೆ ಬಿಚ್ಚಲು ಸಹಾಯ ಮಾಡುತ್ತಿರುವುದು ಮತ್ತು ಪರಸ್ಪರ ಚುಂಬಿಸುತ್ತಿರುವ ದೃಶ್ಯವಿದೆ.


ಈ ವೀಡಿಯೋದಲ್ಲಿ ತಾವು ಯಾವ ರೀತಿ ತಮ್ಮ ಮೊದಲ ರಾತ್ರಿಯನ್ನು ಕಳೆದೆವು ಎಂಬ ವೀಡಿಯೋ ಮೇಲೆ ಬರೆಯಲಾಗಿದೆ. ಈ ವೀಡಿಯೋವನ್ನು ಜ.25ರಂದು ಪೋಸ್ಟ್ ಮಾಡಲಾಗಿದ್ದು, ಇದೀಗ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ, ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದೆ. ಬಹಳ ಕಟುವಾದ ಪದಗಳಿಂದ ದಂಪತಿಯನ್ನು ನೆಟ್ಟಿಗರು ನಿಂದಿಸುತ್ತಿದ್ದಾರೆ. ಲೈಕ್ಸ್ ಮತ್ತು ಶೇರ್‌ಗಾಗಿ ಈ ಮಟ್ಟಕ್ಕೆ ಇಳಿಯಬಾರದು ಎಂದು ಜರಿದಿದ್ದಾರೆ.


ನೀವು ವೈರಲ್ ಆಗಲು ಬಯಸಿದರೆ, ಮುಂದಿನ ಬಾರಿ ತಮ್ಮ ಎಲ್ಲಾ ವೀಡಿಯೋವನ್ನು ಪೋಸ್ಟ್ ಮಾಡಿ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಇದು ನಿಮ್ಮ ಖಾಸಗಿ ಕ್ಷಣ ಎಂಬುದು ನಿಮಗೆ ನೆನಪಿರಲಿ. ಇಂಥದ್ದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡುವ ಅಗತ್ಯವಿಲ್ಲ. ಇದು ಸಿನಿಮಾ ಅಲ್ಲ, ಇದು ನಿಜ ಜೀವನ ಎಂಬುದು ತಿಳಿದಿರಲಿ ಎಂದು ದಂಪತಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article