-->
ತನ್ನ ಖಾಸಗಿ ವೀಡಿಯೋ ವೈರಲ್ ಬಗ್ಗೆ ಕಾಲಿವುಡ್ ನಟಿ ಹೇಳಿದ್ದೇನು?

ತನ್ನ ಖಾಸಗಿ ವೀಡಿಯೋ ವೈರಲ್ ಬಗ್ಗೆ ಕಾಲಿವುಡ್ ನಟಿ ಹೇಳಿದ್ದೇನು?
ಚೆನ್ನೈ: ಕಾಲಿವುಡ್‌ ಕಿರುತೆರೆಯ ಜನಪ್ರಿಯ ನಟಿಯೊಬ್ಬರ ಖಾಸಗಿ ವೀಡಿಯೋವೊಂದು ವೈರಲ್‌ ಆಗಿದೆ ಎನ್ನಲಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ.

ತಮಿಳಿನ ʼಭಾಗ್ಯಲಕ್ಷ್ಮೀʼ ಧಾರಾವಾಹಿಯ ಮೂಲಕ ಜನಪ್ರಿಯರಾಗಿ, ಬಳಿಕ ಬಿಗ್‌ ಬಾಸ್‌ ನಲ್ಲಿ ಕಾಣಿಸಿಕೊಂಡಿದ್ದ ʼತಮಿಳಾ- ತಮಿಳಾʼ ಟಾಕ್‌ ಶೋನಲ್ಲಿ ಮಿಂಚಿದ ನಟಿ ರೇಷ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರು. ಇತ್ತೀಚೆಗೆ ಅಮೆರಿಕಾದಲ್ಲಿದ್ದ ಅವರ ಸಹೋದರಿ, ಕರೆ ಮಾಡಿ ರೇಷ್ಮಾರ ಖಾಸಗಿ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ ಎಂದಾಗಲೇ ಅವರಿಗೆ ಈ ಸುದ್ದಿ ಗೊತ್ತಾಗಿದೆಯಂತೆ. ಆ ಖಾಸಗಿ ವೀಡಿಯೋ ನನ್ನದೇ ಎಂದು ಅವರ ತಂಗಿ ಹೇಳಿದ್ದಾರಂತೆ. ವೀಡಿಯೋ ವೈರಲ್‌ ಆಗಿರುವ ಬೆನ್ನಲ್ಲೇ ರೇಷ್ಮಾ ಇದರ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಸ್ಪಷ್ಟನೆ ನೀಡಿದ್ದಾರೆ.

ಈ ವೀಡಿಯೋ ವೈರಲ್ ಆದ ಸಂದರ್ಭ ತನಗೆ ಯಾವ ಬಾಯ್‌ ಫ್ರೆಂಡ್‌ ಇರಲಿಲ್ಲ. ಆದರೂ ತನ್ನ ಖಾಸಗಿ ವೀಡಿಯೋ ವೈರಲ್ ಆಗಲು ಹೇಗೆ ಸಾಧ್ಯವೆಂದು ತಂಗಿಗೆ ಆ ವೀಡಿಯೋ ಲಿಂಕ್‌ ಕಳುಹಿಸಲು ಹೇಳಿದೆ. ಆ ಬಳಿಕ ನಿಜ ಸಂಗತಿ ಗೊತ್ತಾಯಿತು. ಯಾರೋ ನನ್ನ ಮುಖ ಮಾರ್ಫ್ ಮಾಡಿ ವಿಡಿಯೋದಲ್ಲಿ ವೈರಲ್‌ ಮಾಡಿದ್ದಾರೆ. ಮೊದಲಿಗೆ ನನ್ನ ತಂದೆ – ತಾಯಿಗೆ ಈ ವಿಚಾರ ತಿಳಿದು ಗಾಬರಿಯಾಗಿತ್ತು. ಆ ಬಳಿಕ ಸತ್ಯವನ್ನು ಹೇಳಿದ ಬಳಿಕ ಅವರು ಸಮಾಧಾನಗೊಂಡರು ಎಂದು ನಟಿ ರೇಷ್ಮಾ ಹೇಳಿದ್ದಾರೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article