-->
ಬಿಜೆಪಿ ಮುಖಂಡ ಪತ್ನಿ ಇಬ್ಬರು ಪುತ್ರರೊಂದಿಗೆ ಆತ್ಮಹತ್ಯೆಗೆ ಶರಣು: ಕಾರಣ ತಿಳಿದರೆ ಎಂಥವರ ಕರುಳು ಹಿಂಡುತ್ತೆ

ಬಿಜೆಪಿ ಮುಖಂಡ ಪತ್ನಿ ಇಬ್ಬರು ಪುತ್ರರೊಂದಿಗೆ ಆತ್ಮಹತ್ಯೆಗೆ ಶರಣು: ಕಾರಣ ತಿಳಿದರೆ ಎಂಥವರ ಕರುಳು ಹಿಂಡುತ್ತೆ


ಮಧ್ಯಪ್ರದೇಶ: ಇಲ್ಲಿನ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿ ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ವಿದಿಶಾ ಪಟ್ಟಣದಲ್ಲಿ ನಡೆದಿದೆ.

ಸಂಜೀವ್ ಮಿಶ್ರಾ(45) ಅವರ ಪತ್ನಿ ನೀಲಂ (42) ಇಬ್ಬರು ಪುತ್ರರಾದ ಅನ್ಮೋಲ್ (13) ಮತ್ತು ಸಾರ್ಥಕ್ (7) ಆತ್ಮಹತ್ಯೆಗೆ ಶರಣಾದವರು. ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಈ ಕುಟುಂಬ ಸಲ್ಫಾಸ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದಿಶಾ ನಗರ ಮಂಡಲ್ ಉಪಾಧ್ಯಕ್ಷ ಮತ್ತು ಬಿಜೆಪಿ ಮಾಜಿ ಕಾರ್ಪೊರೇಟರ್ ಸಂಜೀವ್ ಮಿಶ್ರಾ (45) ತಮ್ಮಿಬ್ಬರು ಪುತ್ರರ ಗುಣಪಡಿಸಲಾಗದ ಅನುವಂಶಿಕ ಕಾಯಿಲೆಯ ಬಗ್ಗೆ ಅಸಮಾಧಾನದಿಂದಿದ್ದರು. ಆದ್ದರಿಂದ ಅವರು ಸಾಮಾಜಿಕ ಜಾಲತಾಣದಲ್ಲಿ “ದೇವರು ತನ್ನ ಶತ್ರುಗಳ ಮಕ್ಕಳಿಗೂ ಗುಣಪಡಿಸಲಾಗದ ಮಸ್ಕೂಲರ್ ಡಿಸ್ಟೋಫಿ ಕಾಯಿಲೆ ನೀಡಬಾರದು" ಎಂದು ಬರೆದು ಪೋಸ್ಟ್ ಮಾಡಿ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದೆ.

ಗುರುವಾರ ಸಂಜೆ 6 ಗಂಟೆಗೆ ಈ ಬಗ್ಗೆ ಪೋಸ್ಟ್ ಮಾಡಿ ಆತ್ಮಹತ್ಯೆಯ ವಿಚಾರವನ್ನು ಬರೆದಿದ್ದರು. ಅವರ ಪೋಸ್ಟ್ ಓದಿದ ಕೆಲ ಪರಿಚಯಸ್ಥರು, ಬಂಟಿ ನಗರ ಪ್ರದೇಶದ ಅವರ ಮನೆಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕುಟುಂಬ ಆತ್ಮಹತ್ಯೆ ಮಾಡಿತ್ತು. ತಕ್ಷಣ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಶ್ರಾ ಅವರ ಪುತ್ರರು ಮಸ್ಕೂಲರ್ ಡಿಸ್ಕೊಫಿ ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಗುಣಪಡಿಸಲಾಗದ ಕಾಯಿಲೆಯೆಂದು ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ಮಿಶ್ರಾ ಅವರು ತಮ್ಮ ಮಕ್ಕಳನ್ನು ಉಳಿಸಲು ಸಾಧ್ಯವಾಗದ ಕಾರಣ ಬದುಕಲು ಬಯಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಭಾರ್ಗವ ಹೇಳಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article