-->

ಮಂಗಳೂರು: ತಣ್ಣೀರುಬಾವಿಯಲ್ಲಿ ಆರನೇ ತರಗತಿ ವಿದ್ಯಾರ್ಥಿ ಮೇಲೆ ಲಾಠಿ ಬೀಸಿದ ಪೊಲೀಸ್: ಗರಂ ಆದ ಸ್ಥಳೀಯರು

ಮಂಗಳೂರು: ತಣ್ಣೀರುಬಾವಿಯಲ್ಲಿ ಆರನೇ ತರಗತಿ ವಿದ್ಯಾರ್ಥಿ ಮೇಲೆ ಲಾಠಿ ಬೀಸಿದ ಪೊಲೀಸ್: ಗರಂ ಆದ ಸ್ಥಳೀಯರು


ಮಂಗಳೂರು: ನಗರದ ತಣ್ಣೀರುಬಾವಿ ಬೀಚ್ ನಲ್ಲಿ ರಸ್ತೆ ಬ್ಲಾಕ್ ಆಗಿರುವುದಕ್ಕೆ ಅಲ್ಲಿ ಸೇರಿದ್ದ ಯುವಕರೇ ಕಾರಣವೆಂದು ಪೊಲೀಸರು ಲಾಠಿ ಬೀಸಿ ದುರ್ವತನೆ ತೋರಿದ ಘಟನೆಯ ಬಗ್ಗೆ ಆಕ್ರೋಶ ಕೇಳಿ ಬಂದಿದೆ.

ಪೊಲೀದರು ಲಾಠಿ ಬೀಸಿರುವುದರಿಂದ ಆರನೇ ತರಗತಿಯ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪೆಟ್ಟು ಬಿದ್ದಿದೆ. ಇದರಿಂದ ಪೊಲೀಸರ ವಿರುದ್ಧವೇ ಸ್ಥಳೀಯರು ಗರಂ ಆಗಿ ತಿರುಗಿ ಬಿದ್ದಿದ್ದಾರೆ.


ಸ್ಥಳೀಯರ ಪ್ರಕಾರ, ವೀಕೆಂಡ್ ಆಗಿರುವುದರಿಂದ ಬೆಳಗ್ಗಿನಿಂದಲೂ ತಣ್ಣೀರುಬಾವಿ ಬೀಚ್ ಗೆ ಜನದಟ್ಟಣೆ‌ಅಧಿಕವಾಗಿತ್ತು. ಆದ್ದರಿಂದ ಶನಿವಾರದಿಂದಲೇ ಬ್ಲಾಕ್ ಇತ್ತು. ಭಾನುವಾರ ಸಂಜೆ ಅಲ್ಲಿ ಕ್ರಿಕೆಟ್ ಆಡಿ ಬೈಕಿನಲ್ಲಿ ತೆರಳುತ್ತಿದ್ದ ಯುವಕರನ್ನು ಅಡ್ಡಗಟ್ಟಿದ ಪೊಲೀಸರು, ನಿಮ್ಮಿಂದಲೇ ಬ್ಲಾಕ್ ಆಗಿದೆಯೆಂದು ಥಳಿಸಿದ್ದಾರೆ.

ಲಾಠಿಯ ಏಟಿನಿಂದ ಆರನೇ ಕ್ಲಾಸ್ ವಿದ್ಯಾರ್ಥಿಯೊಬ್ಬನಿಗೆ ಗಂಭೀರ ಹಲ್ಲೆಯಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಕ್ಷಣ ಸ್ಥಳೀಯರು ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದು, ಅವರಿಗೆ ಫೆರಾವ್‌ ಹಾಕಿದ್ದಾರೆ. 'ನೀವು ಲಾಠಿ ಬೀಸಿದ್ದೇಕೆಂದು' ಮೂವರು ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಪಣಂಬೂರು ಪೊಲೀಸರ ಈ ದುರ್ವತನೆಯ ಬಗ್ಗೆ ಸ್ಥಳೀಯರು ಗರಂ ಆಗಿದ್ದಾರೆ. ಘಟನೆಯ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಮೂಲಕ ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ. ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುವ ವಿಡಿಯೋ ವೈರಲ್ ಆಗಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article