-->
ಮೊದಲ ಬಾರಿಗೆ ಪ್ರಿಯಾಂಕ ಚೋಪ್ರಾ - ನಿಕ್ ಜೊನಾಸ್ ಪುತ್ರಿಯ ಮುಖ ರಿವಿಲ್: ವೈರಲ್ ಆಯ್ತು ಕ್ಯೂಟ್ ಮಗುವಿನ ಫೋಟೋ

ಮೊದಲ ಬಾರಿಗೆ ಪ್ರಿಯಾಂಕ ಚೋಪ್ರಾ - ನಿಕ್ ಜೊನಾಸ್ ಪುತ್ರಿಯ ಮುಖ ರಿವಿಲ್: ವೈರಲ್ ಆಯ್ತು ಕ್ಯೂಟ್ ಮಗುವಿನ ಫೋಟೋ


ವಾಷಿಂಗ್ಟನ್: ಕೆಲ ಸೆಲೆಬ್ರಿಟಿಗಳು ಸುರಕ್ಷತೆಯ ಹಿನ್ನೆಲೆಯಲ್ಲಿ ತಮ್ಮ ಮಗುವಿನ ಮುಖವನ್ನು ಕೆಲವು ಸಮಯಗಳವರೆಗೆ ಸಾರ್ವಜನಿಕರ ಮುಂದೆ ರಿವೀಲ್‌ ಮಾಡುವುದಿಲ್ಲ. ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ ನಿಕ್‌ ಜೋನಾಸ್‌ ದಂಪತಿಯೂ ತಮ್ಮ ಪುತ್ರಿಯ ಮುಖವನ್ನು ಇಷ್ಟರವರೆಗೆ ತೋರಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅವರು ತಮ್ಮ ಪುತ್ರಿ ಮಾಲ್ತಿ ಮೇರಿ ಮುಖವನ್ನು ರಿವೀಲ್‌ ಮಾಡಿದ್ದಾರೆ.



ನಿಕ್‌ ಜೋನಸ್‌ ಸಹೋದರರು ಲಾಸ್ ಏಂಜಲೀಸ್ ನ ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್ಸ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಪ್ರಿಯಾಂಕ ಚೋಪ್ರಾ ತಮ್ಮ ಪುತ್ರಿಯ ಮುಖವನ್ನು ಮೊದಲ ಬಾರಿಗೆ ರಿವೀಲ್‌ ಮಾಡಿದ್ದಾರೆ. ಪ್ರಶಸ್ತಿ ಪಡೆದ ಪತಿ ನಿಕ್‌ ಜೋನಸ್‌ ಹಾಗೂ ಸಹೋದರರಿಗೆ ಅಭಿನಂದನೆ ಸಲ್ಲಿಸಿರುವ ಅವರು ತಮ್ಮ ಪುತ್ರಿಯ ಮುಖವನ್ನು ಸಾರ್ವಜನಿಕರ ಮುಂದೆ ಮೊದಲ ಬಾರಿ ರಿವೀಲ್‌ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

2018 ರ ಡಿ.1 - 2 ರಂದು ಹಿಂದೂ – ಕ್ರಿಶ್ಚಿಯನ್‌ ಸಂಪ್ರದಾಯದಲ್ಲಿ ಜೋಧ್‌ ಪುರದಲ್ಲಿ ಪ್ರಿಯಾಂಕಾ – ನಿಕ್‌ ಜೋನಸ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2022ರ ಜನವರಿಯಲ್ಲಿ ಬಾಡಿಗೆ ತಾಯ್ತಾನದ ಮೂಲಕ ಈ ದಂಪತಿ ತಮ್ಮ ಮೊದಲ ಮಗುವನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದರು. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article