ಸುಬ್ರಹ್ಮಣ್ಯ: ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಪಂ ಸದಸ್ಯೆ ಭಾರತಿ ಮೂಕಮಲೆ ಜ. 5ರಂದು ಸುಬ್ರಹ್ಮಣ್ಯ ಠಾಣೆಗೆ ಪ್ರಿಯಕರನೊಂದಿಗೆ ಹಾಜರಾಗಿ ಆತನೊಂದಿಗೆ ತೆರಳಿದ್ದಾರೆ.
ಭಾರತಿ ಮೂಕಮಲೆ ತನ್ನ ಪ್ರಿಯಕರ ನಂದನ್ ಹಾಗೂ ಅವರ ನ್ಯಾಯವಾದಿಯೊಂದಿಗೆ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿದ್ದಾರೆ. ಅಲ್ಲದೆ ತಾನು ನಂದನ್‌ನೊಂದಿಗೆ ಜೀವನ ಮುಂದುವರೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಠಾಣೆಯಲ್ಲಿ ತನ್ನ ನಿರ್ಧಾರವನ್ನು ಲಿಖಿತ ರೂಪದಲ್ಲಿ ಬರೆದು ಕೊಟ್ಟು ನಂದನ್‌ನೊಂದಿಗೆ ತೆರಳಿದ್ದಾರೆ.
ತನ್ನಿಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು, ಪತಿಯನ್ನು ತೊರೆದು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದರು. ಆ ಬಳಿಕ ಭಾರತಿ ಮತ್ತು ಆಕೆಯ ಪ್ರಿಯಕರ ನಂದನ್ ಎಷ್ಟೇ ಹುಡುಕಾಡಿದರೂ ಸಿಕ್ಕಿರಲಿಲ್ಲ. ತಿಂಗಳ ಹಿಂದೆ ವೀಡಿಯೋ ಮಾಡಿ ಹರಿಯಬಿಟ್ಟಿದ್ದ ಭಾರತಿ, ತಾನು ಪ್ರಿಯಕರನೊಂದಿಗೆ ಇರುವುದಾಗಿ ತಿಳಿಸಿದ್ದು, ತನ್ನನ್ನು ಹುಡುಕುವ ಕಾರ್ಯ ಮಾಡಬೇಡಿ ಎಂದು ಕೇಳಿ ಕೊಂಡಿದ್ದರು.
ಆದರೂ ಸುಬ್ರಹ್ಮಣ್ಯ ಠಾಣಾ ಪೊಲೀಸರು ಅವರ ಇರುವಿಕೆಯನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದರು. ಆದರೆ ಆ ಕಾರ್ಯ ಫಲಪ್ರದವಾಗಿರಲಿಲ್ಲ. ಇದೀಗ ಆಕೆಯೇ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.