ಮಂಗಳೂರು: ದ.ಕ.ಜಿಲ್ಲಾ ಪೊಲೀಸ್ ಶ್ವಾನದಳದ ಶ್ವಾನ ಜ್ವಾಲಾ ಇನ್ನಿಲ್ಲ



ಮಂಗಳೂರು: ದ.ಕ.ಜಿಲ್ಲಾ ಪೊಲೀಸ್ ಶ್ವಾನದಳದ ಶ್ವಾನ ಜ್ವಾಲಾ ಜ.3ರಂದು ಬೆಳಗ್ಗೆ 7ಗಂಟೆಗೆ ಮೃತಪಟ್ಟಿದೆ. ಈ ಶ್ವಾನಕ್ಕೆ ಸಕಲ ಪೊಲೀಸ್ ಗೌರವವನ್ನು ಸಲ್ಲಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಡಾಬರ್ ಮೆನ್ ಫಿಂಚರ್ ತಳಿಯ ಹೆಣ್ಣು ಶ್ವಾನ ಜ್ವಾಲಾಗೆ ಈಗ 7 ವರ್ಷ 10 ತಿಂಗಳು. 2015ರ ಫೆ.27ರಂದು ಜನಿಸಿರುವ ಈ ಶ್ವಾನ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿತ್ತು. ತೀವ್ರ ಅನಾರೋಗ್ಯದಿಂದಿದ್ದ ಜ್ವಾಲಾ ಜ.3ರ ಬೆಳಗ್ಗೆ 7ಕ್ಕೆ ಮೃತಪಟ್ಟಿದೆ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆಯವರ ಉಪಸ್ಥಿತಿಯಲ್ಲಿ ಸಕಲ ಪೊಲೀಸ್ ಗೌರವದೊಂದಿಗೆ ಶ್ವಾನದ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. 


BREAKING NEWS
Loading latest news...
Join our WhatsApp Channel Powered By : Online Pudu