-->
ನಾಯಿಗೆ ಹೆದರಿ ಮೂರನೇ ಮಹಡಿಯಿಂದ ಹಾರಿದ ಫುಡ್ ಡೆಲಿವರಿ ಬಾಯ್

ನಾಯಿಗೆ ಹೆದರಿ ಮೂರನೇ ಮಹಡಿಯಿಂದ ಹಾರಿದ ಫುಡ್ ಡೆಲಿವರಿ ಬಾಯ್ಹೈದರಾಬಾದ್: ಫುಡ್ ಡೆಲಿವರಿಗೆ ಬಂದು ಗ್ರಾಹಕಿ ಮನೆಯ ನಾಯಿಗೆ ಹೆದರಿ ಡೆಲಿವರಿ ಬಾಯ್ ಒಬ್ಬರು ಮೂರನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಸಂಭವಿಸಿದೆ.

ಆಹಾರ ಪೊಟ್ಟಣದ ಪಾರ್ಸೆಲ್‌ನೊಂದಿಗೆ ಡೆಲಿವರಿ ಬಾಯ್  ಮೊಹ್ಮದ್ ರಿಜ್ವಾನ್ (23) ಎಂಬವರು ಗ್ರಾಹಕಿ ಕೆ.ಶೋಭನಾ ಎಂಬವರ ಬಂಜಾರಾ ಹಿಲ್‌ನ ಮನೆಯ ಬಾಗಿಲ ಬಳಿ ಕಾಯುತ್ತಿದ್ದಾಗ ಮನೆಯ ನಾಯಿ ಕಾಣಿಸಿಕೊಂಡಿದ್ದನ್ನು ಕಂಡು ಹೆದರಿದ ಆತ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ತಕ್ಷಣವೇ ಗ್ರಾಹಕಿ ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಇದೀಗ ಗ್ರಾಹಕಿ ವಿರುದ್ಧ ಪೊಲೀಸರು ನಿರ್ಲಕ್ಷ್ಯ ಪ್ರಕರಣ ದಾಖಲಿಸಿದ್ದಾರೆ.

ಮೊಹ್ಮದ್ ರಿಜ್ವಾನ್ ಗ್ರಾಹಕಿ ಕೆ.ಶೋಭನಾ ಎಂಬುವವರಿಗೆ  ಆಹಾರ ಪೊಟ್ಟಣ ವಿತರಿಸಲು ಆಗಮಿಸಿದ ವೇಳೆ
11 ವರ್ಷ ವಯಸ್ಸಿನ ಜರ್ಮನ್ ಶೆಫರ್ಡ್ ನಾಯಿ ಬೊಗಳುತ್ತಾ ಬಾಗಿಲ ಬಳಿ ಬಂದಿದೆ. ಇದರಿಂದ ಭೀತಿಯಿಂದ ರಿಜ್ವಾನ್ ಓಡಲು ಆರಂಭಿಸಿದಾಗ ನಾಯಿ ಅಟ್ಟಿಸಿಕೊಂಡು ಬಂದಿದೆ. ಪರಿಣಾಮ ಆತ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ತೀವ್ರ ಗಾಯಗೊಂಡಿದ್ದ ರಿಜ್ವಾನ್‌ನನ್ನು ಶೋಭನಾ ತಕ್ಷಣವೇ ಎನ್‌ಐಎಂಎಸ್‌ಗೆ ದಾಖಲಿಸಿದ್ದಾರೆ. ರಿಜ್ವಾನ್ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯ ಸಹೋದರ ನೀಡಿದ ದೂರಿನ ಮೇಲೆ ಶೋಭಾ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 336 ಮತ್ತು 289ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article