-->
ದಕ್ಷಿಣ ಭಾರತದ ಪ್ರಖ್ಯಾತ ನಟಿ ಅಮಲಾ ಪೌಲ್ ಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಣೆ

ದಕ್ಷಿಣ ಭಾರತದ ಪ್ರಖ್ಯಾತ ನಟಿ ಅಮಲಾ ಪೌಲ್ ಗೆ ದೇವಸ್ಥಾನದೊಳಗೆ ಪ್ರವೇಶ ನಿರಾಕರಣೆತಿರುವನಂತಪುರ: ಇಲ್ಲಿನ ತಿರುವೈರನಿಕುಲಂ ಮಹಾದೇವ ದೇವಸ್ಥಾನಕ್ಕೆ ದಕ್ಷಿಣ ಭಾರತದ ಪ್ರಖ್ಯಾತ ನಟಿ ಅಮಲಾ ಪೌಲ್ ಗೆ ಪ್ರವೇಶ ನಿರಾಕರಿಸಲಾಗಿದೆ. ನಡುತುರುಪ್ಪು ಉತ್ಸವದ ಹಿನ್ನೆಲೆಯಲ್ಲಿ ಅಮಲಾ ದೇವಸ್ಥಾನಕ್ಕೆ ಬಂದ ವೇಳೆ ದೇವಸ್ಥಾನದ ಆಡಳಿತ ಅಧಿಕಾರಿಗಳು ತನಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ.

ದೇವಾಲಯದ ಒಳಗೆ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಎಂಬ ಕಾರಣ ನೀಡಿ ತನಗೆ ದೇವರ ದರ್ಶನಕ್ಕೆ ಆಡಳಿತ ಮಂಡಳಿ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. ದೇವಾಲಯದ ಸಂದರ್ಶಕರ ನೋಂದಣಿ ಪುಸ್ತಕದಲ್ಲಿ ತನ್ನ ಅನುಭವ ಹಂಚಿಕೊಂಡಿರುವ ಅವರು, “ಆಕೆ ದೇವತೆಯನ್ನು ನೋಡದೇ ಇದ್ದರೂ ಚೈತನ್ಯವನ್ನು ಅನುಭವಿಸುತ್ತಾಳೆ” ಎಂದು ಬರೆದಿದ್ದಾರೆ.

“2023ರಲ್ಲಿ ಕೂಡ ಧಾರ್ಮಿಕ ತಾರತಮ್ಯ ಅಸ್ತಿತ್ವದಲ್ಲಿರುವುದು ತನಗೆ ತೀವ್ರ ದುಃಖ ಹಾಗೂ ನಿರಾಶೆ ಉಂಟು ಮಾಡಿದೆ. ಈ ರೀತಿಯ ಧಾರ್ಮಿಕ ತಾರತಮ್ಯ ಶೀಘ್ರದಲ್ಲಿಯೇ ಸರಿಯಾಗಬಹುದು ಎಂದು ತನಗೆ ಭರವಸೆಯಿದೆ. ನಮ್ಮನ್ನು ಸಮಾನವಾಗಿ ಕಾಣುವ ಸಮಯ ಬರಲಿದೆ” ಎಂದು ಅವರು ಹೇಳಿದ್ದಾರೆ. ಆದರೆ, ತಿರುವೈರನಿಕುಲಂ ಮಹಾದೇವ ದೇವಾಲಯದ ಟ್ರಸ್ಟ್, ನಾವು ದೇವಾಲಯದ ಸಂಪ್ರದಾಯವನ್ನು ಮಾತ್ರ ಅನುಸರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article