-->
ಜೈಲಿನಿಂದ ಬಿಡುಗಡೆಯಾದ 98ರ ವಯೋವೃದ್ಧನಿಗೆ ಜೈಲು ಅಧಿಕಾರಿಯಿಂದ ಸನ್ಮಾನ: ಎಸ್ಕಾರ್ಟ್ ಮೂಲಕ ಮನೆಗೆ ಕಳುಹಿಸಿದ ಪೊಲೀಸರು

ಜೈಲಿನಿಂದ ಬಿಡುಗಡೆಯಾದ 98ರ ವಯೋವೃದ್ಧನಿಗೆ ಜೈಲು ಅಧಿಕಾರಿಯಿಂದ ಸನ್ಮಾನ: ಎಸ್ಕಾರ್ಟ್ ಮೂಲಕ ಮನೆಗೆ ಕಳುಹಿಸಿದ ಪೊಲೀಸರುಲಕ್ನೋ: ಐದು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ 98 ವರ್ಷದ ವಯೋವೃದ್ಧ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಈ ವೇಳೆ ಆತನನ್ನು ಅಲ್ಲಿನ ಪೊಲೀಸರು ಬೀಳ್ಕೊಡುಗೆ ಸಮಾರಂಭ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯ ರಾಮ್ ಸೂರತ್ (98) ಹಲ್ಲೆ ಪ್ರಕರಣವೊಂದರಲ್ಲಿ ಕಳೆದ 5 ವರ್ಷದಿಂದ ಜೈಲು ವಾಸಿಯಾಗಿದ್ದ. ಇದೀಗ ಆತ ಸಂಪೂರ್ಣ ಶಿಕ್ಷೆ ಪೂರೈಸಿ ಬಿಡುಗಡೆಯಾಗಿದ್ದಾನೆ. ಈ ವೇಳೆ ರಾಮ್ ಸೂರತ್‍ಗೆ ಅಲ್ಲಿನ ಪೊಲೀಸ್ ಸಿಬ್ಬಂದಿ ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ರಾಮ್ ಸೂರತ್ ನಿಗೆ ಅಯೋಧ್ಯೆಯ ಜೈಲಿನ ಜಿಲ್ಲಾ ಅಧೀಕ್ಷಕ ಶಶಿಕಾಂತ್ ಮಿಶ್ರಾ ಪುತ್ರಾವತ್ ಅವರು ರಾಮ್ ಸೂರತ್ ಮನೆಗೆ ಹೋಗಲು ಬೆಂಗಾವಲು (ಎಸ್ಕಾರ್ಟ್) ವಾಹನವನ್ನು ನೀಡಿದ್ದಾರೆ. 

ಈ ಬಗ್ಗೆ ಡಿಜಿ ಪ್ರಿಸನ್ಸ್ ಯುಪಿ ಟ್ವೀಟ್ ಮಾಡಿದ್ದು, ಅದರಲ್ಲಿ ರಾಮ್ ಸೂರತ್‍ಗೆ ಮುಂದಿನ ಜೀವನ ಚೆನ್ನಾಗಿರಲಿ ಎಂದು ಆಶಿಸಿದ್ದಾರೆ. ಈ ವೀಡಿಯೋದಲ್ಲಿ ರಾಮ್ ಸೂರತ್ ನ ಸಂಬಂಧಿಗಳು ಯಾರೂ ಬಂದಿಲ್ಲದಿರುವುದನ್ನು ಗಮನಿಸಬಹುದು. ರಾಮ್ ಸೂರತ್ ಐಪಿಸಿ ಸೆಕ್ಷನ್ 452, 323, 352 ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article