-->
1000938341
ಉದ್ಯಮಿಯ ವಿರುದ್ಧವೇ ಬಾಣ ತಿರುಗಿಸಿದ ಯೂಟ್ಯೂಬ್ ಸುಂದರಿ: ರಾತ್ರಿ ಪಾರ್ಟಿಯ ಬಗ್ಗೆ ಆಕೆ ಹೇಳಿದ್ದೇನು?

ಉದ್ಯಮಿಯ ವಿರುದ್ಧವೇ ಬಾಣ ತಿರುಗಿಸಿದ ಯೂಟ್ಯೂಬ್ ಸುಂದರಿ: ರಾತ್ರಿ ಪಾರ್ಟಿಯ ಬಗ್ಗೆ ಆಕೆ ಹೇಳಿದ್ದೇನು?


ನವದೆಹಲಿ: ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆಂದು ಬೆದರಿಕೆಯೊಡ್ಡಿ ಉದ್ಯಮಿಯಿಂದ 80 ಲಕ್ಷ ರೂ. ಹಣ ಸುಲಿಗೆ ಮಾಡಿರುವ ಆರೋಪದಲ್ಲಿ ಪೊಲೀಸರಿಂದ ಬಂಧಿತಳಾದ ದೆಹಲಿ ಮೂಲದ ಮಹಿಳಾ ಯೂಟ್ಯೂಬರ್, ತನ್ನನ್ನು ಒಲಿಸಿಕೊಳ್ಳಲು ಉದ್ಯಮಿ ಪ್ರಯತ್ನಿಸುತ್ತಿದ್ದ ಎಂದು ಉದ್ಯಮಿಯ ವಿರುದ್ಧವೇ ಬಾಣ ತಿರುಗಿಸಿದ್ದಾಳೆ.

ನಮ್ರಾ ಖಾದಿರ್ (22) ಬಂಧಿತ ಆರೋಪಿ. ಈಕೆ ಉದ್ಯಮಿ ದಿನೇಶ್ ಯಾದವ್ ಎಂಬ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿ, ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 80 ಲಕ್ಷ ರೂ. ಹಣ ಸುಲಿಗೆ ಮಾಡಿದ್ದಾಳೆಂಬ ಆರೋಪ ಹೊತ್ತಿದ್ದಳು. ಅಷ್ಟಕ್ಕೂ ನಮ್ರಾ ಖಾದಿರ್ ಸಾಮಾನ್ಯ ಮಹಿಳೆಯೇನಲ್ಲ. ಈಕೆ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ. ತನ್ನ ಮಾದಕ ವೀಡಿಯೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾಳೆ. ಆಕೆಯ ಇನ್‌ಸ್ಟಾಗ್ರಾಂ ಖಾತೆಯನ್ನು ನೋಡಿದರೆ ಸಾಕಷ್ಟು ಬೋಲ್ಡ್ ವೀಡಿಯೋಗಳೇ ಸಿಗುತ್ತವೆ.


ವಿರಾಟ್ ಬೆನಿವಾಲ್ ಅಲಿಯಾಸ್ ಮನೀಶ್ ಎಂಬವನನ್ನು ಮದುವೆಯಾಗಿದ್ದ ನಮ್ರಾ ಖಾದಿರ್, ಗುರುಂಗಾವ್‌ನಲ್ಲಿ ವಾಸವಿದ್ದಳು. ದಂಪತಿ ಆಗಾಗ ಫನ್ನಿ ರೀಲ್ಸ್ ಗಳನ್ನು ಮಾಡಿ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ನಮ್ರಾಳ ಸೌಂದರ್ಯವನ್ನು ನೋಡಿ ಸಂತ್ರಸ್ತ ಉದ್ಯಮಿ ದಿನೇಶ್ ಯಾದವ್ ಕೂಡ ಮರುಳಾಗಿದ್ದ. ಬಾದ್ರಪುರ್ ನಿವಾಸಿಯಾಗಿರುವ ಸಂತ್ರಸ್ತ ಉದ್ಯಮಿ ದಿನೇಶ್ ಯಾದವ್ ಕಳೆದ ಆಗಸ್ಟ್ ತಿಂಗಳಲ್ಲೇ ದೂರು ನೀಡಿದ್ದರು. ಆದರೆ, ಆರೋಪಿತೆ ಮಧ್ಯಂತರ ಜಾಮೀನಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಜಾಮೀನು ಅರ್ಜಿ ರದ್ದುಗೊಂಡ ಬಳಿಕ ನವೆಂಬರ್ 26ರಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಖಾಸಗಿ ಜಾಹಿರಾತು ಸಂಸ್ಥೆ ನಡೆಸುತ್ತಿರುವ ದಿನೇಶ್ ಯಾದವ್ ನೀಡಿರುವ ದೂರಿನನ್ವಯ ಅವರಿಗೆ ಕೆಲವು ತಿಂಗಳುಗಳ ಹಿಂದೆ ಖಾದಿರ್ ಹಾಗೂ ಆಕೆಯ ಪತಿ ಮನೀಶ್ ಪರಿಚಯವಾಗಿದೆ. ಕಂಪನಿಯ ಜಾಹಿರಾತಿಗಾಗಿ ನಮ್ರಾ ಖಾದಿರ್‌ಗೆ ದಿನೇಶ್ ಯಾದವ್ 2 ಲಕ್ಷ ರೂ. ಹಣ ನೀಡಿದ್ದರಂತೆ. ಇದಾದ ಬಳಿಕ ತನ್ನನ್ನು ಇಷ್ಟಪಡುತ್ತಿರುವುದಾಗಿ ಮತ್ತು ಮದುವೆ ಆಗಲು ಬಯಸಿರುವುದಾಗಿ ಖಾದಿರ್ ಹೇಳಿದ್ದಾಳೆಂದು ದಿನೇಶ್ ಯಾದವ್ ಆರೋಪಿಸಿದ್ದಾರೆ‌.

ಆಗಸ್ಟ್‌ನಲ್ಲಿ ಖಾದಿರ್ ಮತ್ತು ಮನೀಶ್ ರೊಂದಿಗೆ ತಾನು ಕ್ಲಬ್ ಒಂದಕ್ಕೆ ತೆರಳಿದೆ. ಅಲ್ಲದೆ, ಒಂದು ರಾತ್ರಿಗೆ ರೂಮ್ ಬುಕ್ ಮಾಡಿದೆವು. ಆದರೆ, ಮಾರನೇ ದಿನ ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ನಮ್ರಾ ಖಾದಿರ್ ಬೆದರಿಸಿದ್ದಾಳೆ. ಬಳಿಕ ನನ್ನಿಂದ 80 ಲಕ್ಷ ರೂ ಹಣ ಮತ್ತು ಇತರೆ ಉಡುಗೊರೆಗಳನ್ನು ಪಡೆದಿದ್ದಾಳೆ ಎಂದು ದೂರಿನಲ್ಲಿ ದಿನೇಶ್ ಯಾದವ್ ತಿಳಿಸಿದ್ದಾರೆ.

ಸಂತ್ರಸ್ತನ ತಂದೆಯ ಬ್ಯಾಂಕ್ ಖಾತೆಯಿಂದಲೂ 5 ಲಕ್ಷ ರೂ. ವಿತ್‌ಡ್ರಾ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ತಂದೆ ಮಗನನ್ನು ಪ್ರಶ್ನೆ ಮಾಡಿದಾಗ, ಆತ ನಡೆದಿದ್ದೆಲ್ಲವನ್ನು ತಂದೆಯ ಮುಂದೆ ವಿವರಿಸಿದ್ದಾನೆ. ಬಳಿಕ ತಂದೆಯೇ ಮಗನನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.

ಸೋಮವಾರ ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿ, ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಖಾದಿರ್, ಪತಿ ಮನೀಶ್ ಅಲಿಯಾಸ್ ವಿರಾಟ್ ಬೆನಿವಾಲ್ ಕೂಡ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಪೊಲೀಸರ ಮುಂದೆ ಆರೋಪಿ ತಪ್ಪೋಪ್ಪಿಕೊಂಡಿದ್ದು, ಹಣ ಸೇರಿದಂತೆ ಇತರೆ ವಸ್ತುಗಳನ್ನು ಆಕೆಯಿಂದ ಪೊಲೀಸರು ವಶ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಆಕೆಯ ಪತಿಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿರುವ ನಮ್ರಾ, ದಿನೇಶ್ ನನಗೆ 80 ಲಕ್ಷ ರೂ. ಕೊಟ್ಟಿಲ್ಲ. ಅವನು ನೀಡಿರುವ ಹಣವನ್ನು ಅವನು ತನ್ನ ಕೆಲಸಕ್ಕಾಗಿ ಕೊಟ್ಟಿದ್ದಾರೆ. ಹೋಟೆಲ್‌ಗೆ ಸಂಬಂಧಪಟ್ಟಂತೆ, 2021ರ ಡಿಸೆಂಬರ್ 2 ರಂದು ಶಾಲಿಮಾರ್ ಬಾಗ್‌ನಲ್ಲಿರುವ ನನ್ನ ಮನೆಯಿಂದ ನನ್ನನ್ನು ಕರೆದುಕೊಂಡು ಹೋಗಲು ದಿನೇಶ್ ಬಂದಿದ್ದರು. ಗುರುಗ್ರಾಮ್‌ನಲ್ಲಿ ಪಾರ್ಟಿಗೆ ಹೋದೆವು. ಈ ಪಾರ್ಟಿ ನನ್ನ ಯೂಟ್ಯೂಬ‌್ ಸ್ನೇಹಿತರೊಬ್ಬರ ಫ್ಲಾಟ್‌ನಲ್ಲಿ ನಡೆಯಿತು. ದಿನೇಶ್ ಬಗ್ಗೆ ಅಷ್ಟೇನು ಪರಿಚಯ ಇರಲಿಲ್ಲ. ಆದರೆ, ಗೆಳೆಯರ ಸಲಹೆ ಮೇರೆಗೆ ದಿನೇಶ್ ಮತ್ತು ನನ್ನ ಪತಿ ವಿರಾಟ್ ರೊಂದಿಗೆ ಅಂದು ಪಾರ್ಟಿಗೆ ಹೋಗಿದ್ದೆ. ಆದರೆ, ದಿನೇಶ್ ನನ್ನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದ. ದುಬಾರಿ ಬೆಲೆಯ ಚಾಕೋಲೇಟ್‌ಗಳನ್ನು ಕೊಡುತ್ತಿದ್ದರು ಎಂದು ಆರೋಪಿ ಮಾಡಿದ್ದಾಳೆ.

Ads on article

Advertise in articles 1

advertising articles 2

Advertise under the article