ಶುಕ್ರ ಸಂಚಾರ: ಹೊಸ ವರ್ಷದ ಆರಂಭದಲ್ಲಿ ಈ ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿ!


ಸಿಂಹ ರಾಶಿ
ಉದ್ಯೋಗ-ವ್ಯವಹಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶದ ಜೊತೆಗೆ ಹಣಕಾಸಿನ ಲಾಭವಾಗಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿಬರಲಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.


ಕನ್ಯಾ ರಾಶಿ
ಶುಕ್ರ ಸಂಚಾರದಿಂದ ರೂಪುಗೊಳ್ಳಲಿರುವ ಲಕ್ಷ್ಮೀ ನಾರಾಯಣ ಯೋಗದ ಪರಿಣಾಮದಿಂದಾಗಿ ಕನ್ಯಾ ರಾಶಿಯವರು ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 

ಧನು ರಾಶಿ
ಹೊಸ ಮೂಲಗಳಿಂದ ಹರಿದು ಬರಲಿರುವ ಧನ ಲಾಭದಿಂದಾಗಿ ನಿಮ್ಮ ಆರ್ಥಿಕ ಸಂಕಷ್ಟಗಳು ಕೊನೆಗೊಳ್ಳಲಿವೆ. ದಾಂಪತ್ಯ ಜೀವನ ಸಂತೋಷಮಯವಾಗಿರುತ್ತದೆ. ಸಂತಾನ ಪ್ರಾಪ್ತಿ ಯೋಗವೂ ಇದೆ. ಈ ಸಮಯದಲ್ಲಿ ಬಡ್ತಿಯ ಜೊತೆಗೆ ಮನೆ, ವಾಹನ ಖರೀದಿ ಯೋಗವೂ ಇದೆ.