-->
ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿ ಫೇಸ್ ಬುಕ್ ಗೆ ಫೋಟೋ ಅಪ್ಲೋಡ್ ಮಾಡಿದ ಖತರ್ನಾಕ್ ಮಹಿಳೆ

ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿ ಫೇಸ್ ಬುಕ್ ಗೆ ಫೋಟೋ ಅಪ್ಲೋಡ್ ಮಾಡಿದ ಖತರ್ನಾಕ್ ಮಹಿಳೆ


ಇಂಡೊನೇಷ್ಯಾ: ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡಲಾಗದೆ ಇರುವವರು ಬೇರೆಬೇರೆ ರೀತಿ ನಾಟಕ ಮಾಡುವುದನ್ನು ನಾವು ನೋಡುತ್ತಿರುತ್ತೇವೆ. ಹಲವರು ದೇಶವನ್ನೇ ಬಿಟ್ಟು ಓಡಿ ಹೋದರೆ ಇನ್ನು ಕೆಲವರು ಹೇಳ ಹೆಸರಿಲ್ಲದಂತೆ ನಾಪತ್ತೆಯಾಗುತ್ತಾರೆ. ಆದರೆ ಇಲ್ಲೊಬ್ಬಳು ತಾನು ಸತ್ತಿರುವ ರೀತಿಯ ಫೋಟೊವನ್ನು ಫೇಸ್ ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದಾಳೆ!

ಇಂಡೋನೇಷ್ಯಾ ದೇಶದ ಲಿಜಾ ದೇವಿ ಪ್ರಮಿತಾ ಎಂಬಾಕೆಯೇ ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಲು ಸತ್ತಿರುವಂತೆ ನಾಟಕ ಮಾಡಿದ ಕತರ್ನಾಕ್ ಮಹಿಳೆ. ಆಕೆ ಮೃತದೇಹದ ರೀತಿ ವೇಷ ಹಾಕಿದ್ದು ಪುತ್ರುಯ ಸಹಕಾರದಿಂದ ಫೋಟೋ ತೆಗೆಸಿಕೊಂಡಿದ್ದಾಳೆ. ಬಳಿಕ ಆ ಫೋಟೋಗಳನ್ನು ಆಕೆಯ ಪುತ್ರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಆದರೆ ಸಾಲ ನೀಡಿದವರಿಗೆ ಆಕೆಯ ಅಚಾನಕ್ ಸಾವು ಅನುಮಾನ ಮೂಡಿಸಿದೆ. ಆದ್ದರಿಂದ ಈ ಪೋಸ್ಟ್ ಹಿಂದಿರುವ ಸತ್ಯಾಂಶವನ್ನು ಪರಿಶೀಲಿಸಿದಾಗ ನಿಜ ವಿಚಾರ ಬೆಳಕಿಗೆ ಬಂದಿದೆ.

ಮಾಯಾ ಗುಣವಾನ್ ಎಂಬಾತ ಪ್ರಮಿತಾಗೆ 22,000 ರೂ. ಸಾಲ ನೀಡಿದ್ದನು. ಈ ಹಣವನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಮಿತಾ ಸಾಲ ಮರುಪಾವತಿಗೆ ಇನ್ನಷ್ಟು ಗಡುವು ಕೇಳಿದ್ದಾಳೆ. ಆದರೆ, ಎರಡನೇ ಗಡುವು ಸಮೀಪಿಸುತ್ತಿದ್ದಂತೆ, ಆಕೆ ಈ ವಿಲಕ್ಷಣವಾದ ನಾಟಕ ಮಾಡಿದ್ದಾಳೆ. ಸದ್ಯ ಪ್ರಮಿತಾ ತಲೆಮರೆಸಿಕೊಂಡಿದ್ದು ಮಾಯಾ ಗುಣವಾನ್‌ಗೆ ಇನ್ನೂ ಕೊಟ್ಟ ಸಾಲ ವಾಪಸ್ ಮಾಡಿಲ್ಲ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article