-->
 ‘ಡೆಟಾ ಅನಾಲಿಟಿಕ್ಸ್ ಮತ್ತು ಲರ್ನಿಂಗ್’ ಕುರಿತು ಅಂತಾರಾಷ್ಟ್ರೀಯ ವಿಚಾರಸಂಕಿರಣ

‘ಡೆಟಾ ಅನಾಲಿಟಿಕ್ಸ್ ಮತ್ತು ಲರ್ನಿಂಗ್’ ಕುರಿತು ಅಂತಾರಾಷ್ಟ್ರೀಯ ವಿಚಾರಸಂಕಿರಣ

 
ಶಿಕ್ಷಣವು ಪರೀಕ್ಷಾ ಕೇಂದ್ರಿತವಾಗದೆ ಜ್ಞಾನಾಧಾರಿತವಾಗಬೇಕು: ಪ್ರೊ. ಪಿ.ನಾಗಭೂಷಣ

ಮೂಡುಬಿದಿರೆ: ಪ್ರಸ್ತುತ ಭಾರತದ ಶಿಕ್ಷಣವು ಕೇವಲ ಪರೀಕ್ಷಾ ಕೇಂದ್ರಿತವಾಗಿದ್ದು ಅದು ಜ್ಞಾನಾಧರಿತ ಹಾಗೂ ಮೌಲ್ಯಾಧಾರಿತವಾಗಬೇಕಿದೆ ಎಂದು ಆಂಧ್ರಪ್ರದೇಶದ ವಿಜ್ಞಾನ್ ವಿಶ್ವವಿದ್ಯಾನಿಲಯದ ಕುಲಪತಿ  ಡಾ ಪಿ.ನಾಗಭೂಷಣ ಅವರು ಹೇಳಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ನಡೆದ ‘ಡೆಟಾ ಅನಾಲಿಟಿಕ್ಸ್ ಮತ್ತು ಲರ್ನಿಂಗ್’ ೨ನೇ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣವು ಮಾಹಿತಿ, ಪರಾಮರ್ಶನ, ನೈಸರ್ಗಿಕ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವಿಕೆಯಿಂದ ಕೂಡಿರಬೇಕು. ಯುವಜನತೆ ಅನಗತ್ಯ ವಿಷಯಗಳ ಕುರಿತು ಚರ್ಚೆ ಮಾಡುವ ಬದಲು ಸಂಶೋಧನಾತ್ಮಕ ವಿಚಾರಗಳ ಕುರಿತು ಗಮನ ಹರಿಸಬೇಕು  ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನಸ್‌ನ ಡಾ ಲಲಿತ್ ಮೋಹನ್ ಪಟ್ನಾಯಕ್ ಅವರು ಮಾತನಾಡಿ, ಪ್ರಸ್ತುತ ಎಲ್ಲಾ ಕ್ಷೇತ್ರಗಳು ಯಾಂತ್ರೀಕೃತವಾಗಿದ್ದು, ಇದು ಉತ್ತಮ ಬೆಳವಣಿಗೆಯಲ್ಲ.  ಭಾರತದಲ್ಲಿ ಸಂಶೋಧನೆಗೆ ವಿಫುಲ ಅವಕಾಶಗಳಿದ್ದು ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಅಪಾರವಾದ ಡೆಟಾ(ದತ್ತಾಂಶ) ಲಭ್ಯವಿದ್ದು ಅವನ್ನು  ಸಮರ್ಪಕವಾಗಿ ಬಳಸಿಕೊಂಡು ಸಂಶೋಧನೆ ಕೈಗೊಳ್ಳಬೇಕಾಗಿದೆ. ಸಾಮಾಜಿಕ ಅಗತ್ಯತೆಗನುಗುಣವಾಗಿ ಸಂಶೋಧನೆಯ ಅವಶ್ಯಕತೆಯಿದೆ ಎಂದರು. 

(ಬಾಕ್ಸ್ ಐಟಂ)ಪ್ರಸ್ತುತ “ಮನೆಗೆ ಟಿವಿ ಬಂದ ಮೇಲೆ ಓದುವುದನ್ನು ನಿಲ್ಲಿಸಿದೆವು, ಕಾರು ಮನೆ ಬಾಗಿಲಿಗೆ ಬಂದಾಗ ನಡೆಯುವುದನ್ನು ನಿಲ್ಲಿಸಿದೆನು, ನಗರದಲ್ಲಿ ನೆಲೆಸಿದ ನಂತರ ಮಣ್ಣಿನ ವಾಸನೆ ಸವಿಯುವುದನ್ನು ನಿಲ್ಲಿಸಿದೆವು, ಫರ್‌ಫ್ಯೂಮ್ ಬಳಸಿದ ಮೇಲೆ, ಏಸಿ ಬಂದ ಮೇಲೆ ಮರಗಿಡಗಳ ನೆರಳನ್ನು ಮರೆತೆವು, ಕಂಪ್ಯೂಟರ್ ಬಂದ ಮೇಲೆ ಸ್ಫೆಲಿಂಗ್ ಮರೆತೆವು, ವಾಟ್ಸಾಪ್ ಬಂದ ಮೇಲೆ ಬರೆಯುವುದನ್ನು ನಿಲ್ಲಿಸಿದೆವು” ಪ್ರೊ. ಎಲ್.ಎನ್.ಪಟ್ನಾಯಕ್ 

ಮುಖ್ಯ ಅತಿಥಿಯಾಗಿದ್ದ ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಡಾ ಎಚ್. ರಾಘವ್ ರಾವ್‌ರವರು ತಮ್ಮ ವೃತ್ತಿ ಜೀವನ ಹಾಗೂ ಸಂಶೋಧನಾ ಅನುಭವಗಳನ್ನು ಹಂಚಿಕೊAಡರು. 

ಮೈಸೂರು ವಿಶ್ವವಿದ್ಯಾನಿಲಯದ ಪ್ರೊ. ಗುರು ಅವರು ಮಾತನಾಡಿ, ಈ ಅಂತಾರಾಷ್ಟಿçÃಯ ವಿಚಾರಸಂಕಿರಣದಲ್ಲಿ ೨೩ ವಿವಿಧ ವಿಷಯ ತಜ್ಞರು ತಮ್ಮ ಪ್ರಬಂಧ ಮಂಡಿಸಲಿದ್ದು ಸಂಶೋಧನಾ ವಿದ್ಯಾರ್ಥಿಗಳು ಸದುಪಯೊಗಪಡಿಸಿ ಕೊಳ್ಳಬೇಕೆಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಶೋಧನಾ ವಿಚಾರ ಸಂಕಿರಣಗಳು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಕೊಳ್ಳಬೇಕೆಂದು ಕರೆ ನೀಡಿದರು.

ಐಐಐಟಿ ಅಲಹಾಬಾದ್ ಸಹ ಪ್ರಾಧ್ಯಪಕ  ಡಾ. ಮೊಹಮ್ಮದ್ ಜಾವೆದ್  ಹಾಗೂ ಡೆಟಾ ಸೈಂಟಿಸ್ಟ್ ವಿನಯ್ ಕುಮಾರ್ ಎನ್., ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ‍್ಯಕ್ರಮದಲ್ಲಿ ಗೋವಾದಿಂದ ೦೨, ಚಂಡೀಗಡ್‌ನಿಂದ 03, ಇರಾನ್‌ನಿಂದ 01 ಹಾಗೂ ಕರ್ನಾಟಕದ ವಿವಿಧ ವಿವಿಗಳಿಂದ 23 ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು. 

ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ಶೇಖರ್, ಅಲಹಾಬಾದ್ ಐಟಟಿಯ ಡಾ. ಪವನ್ ಚಕ್ರವರ್ತಿ, ಹುಬ್ಬಳ್ಳಿ ಕೆಇಎಲ್ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಬಸವರಾಜ್ ಅನಮಿ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ  ಡಾ ಮಂಜುನಾಥ ಕೊಟ್ಟಾರಿ ಸ್ವಾಗತಿಸಿದರು. ಉಪನ್ಯಾಸಕ ರಿಜ್ವಾನ್ ಶೇಖ್ ವಂದಿಸಿದರು. ಪ್ರಾಧ್ಯಾಪಕಿ ದೀಕ್ಷಾ ಎಂ. ಕಾರ್ಯಕ್ರಮ ನಿರೂಪಿಸಿದರು.Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article