-->
ಕಾಂಡೊಮ್ ಧರಿಸಲು ಹೇಳಿದರೂ ಕೇಳದೆ ಬಲವಂತದ ಲೈಂಗಿಕ ಸಂಪರ್ಕ ಬೆಳೆಸಿದ: ಶ್ರೀಲಂಕಾ ಕ್ರಿಕೆಟಿಗನ ಕಾಮುಕತೆಯನ್ನು ಬಿಚ್ಚಿಟ್ಟ ಮಹಿಳೆ

ಕಾಂಡೊಮ್ ಧರಿಸಲು ಹೇಳಿದರೂ ಕೇಳದೆ ಬಲವಂತದ ಲೈಂಗಿಕ ಸಂಪರ್ಕ ಬೆಳೆಸಿದ: ಶ್ರೀಲಂಕಾ ಕ್ರಿಕೆಟಿಗನ ಕಾಮುಕತೆಯನ್ನು ಬಿಚ್ಚಿಟ್ಟ ಮಹಿಳೆ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಡಲು ತೆರಳಿದ್ದ ವೇಳೆ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಮಹಿಳೆಯೊಬ್ಬರ ಮೇಲೆ ಅನೇಕ ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಆಕೆಯ ಕತ್ತು ಹಿಸುಕಿ ಕೊಲೆಗೈಯುವ ಯತ್ನವೂ ನಡೆದಿದೆ ಎನ್ನಲಾಗಿದ್ದು, ಇದೀಗ ಕ್ರಿಕೆಟಿಗ ದನುಷ್ಕಾ ಗುಣತಿಲಕನನ್ನು ಸಿಡ್ನಿ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 2ರಂದು ಮಹಿಳೆಯೊಬ್ಬರ ಮೇಲೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿರುವ ಆರೋಪದ ತನಿಖೆಯ ಬಳಿಕ ದನುಷ್ಕಾ ಗುಣತಿಲಕ(31)ನನ್ನು ನ.6ರ ನಸುಕಿನ ವೇಳೆ ಸಿಡ್ನಿ ನಗರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಮುಂದೆ ದನುಷ್ಕಾ ಗುಣತಿಲಕನನ್ನು ಹಾಜರುಪಡಿಸಲಾಗಿದೆ. ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಜಾಮೀನು ನಿರಾಕರಣೆ ಮಾಡಲಾಗಿದೆ. 

ನವೆಂಬರ್ 2ರಂದು ಸಿಡ್ನಿಯ ಒಪೇರಾ ಹೌಸ್ ಬಳಿಯ ಜನಪ್ರಿಯ ಬಾರ್‌ನಲ್ಲಿ ಭೇಟಿಯಾಗುವ ಮೊದಲು ಇಬ್ಬರೂ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯಗೊಂಡಿದ್ದರು. ಬಾರ್‌ನಲ್ಲಿ ಭೇಟಿಯಾದ ಬಳಿಕ ದನುಷ್ಕಾ ಗುಣತಿಲಕ ದೋಣಿಯಲ್ಲಿ ಸಂತ್ರಸ್ತೆಯ ಮನೆಗೆ ಆಕೆಯೊಂದಿಗೆ ಪ್ರಯಾಣಿಸಿದರು. ಇಬ್ಬರೂ ಸಾಕಷ್ಟು ಮದ್ಯ ಸೇವಿಸಿದ ಬಳಿಕ ಗುಣತಿಲಕ ತನ್ನ ಮೇಲೆ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸ್ ದೂರು ದಾಖಲಿಸಿದ್ದಾಳೆ.

ಕಾಂಡೋಮ್ ಧರಿಸಲು ಹೇಳಿದರೂ ಅದನ್ನು ವಿರೋಧಿಸಿ ಬಲವಂತಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆಂದು ಮಹಿಳೆ ಆರೋಪ ಮಾಡಿದ್ದಾರೆ. ಅಲ್ಲದೆ ಕತ್ತು ಹಿಸುಕಿರುವ ಪರಿಣಾಮ ಮೆದುಳಿನಲ್ಲಿ ಗಾಯವಾಗಿದೆಯೇ ಎಂಬುದನ್ನು ತಿಳಿಯಲು ಸಂತ್ರಸ್ತೆಗೆ ಸ್ಕ್ಯಾನ್ ಮಾಡಿಸುವ ಅವಶ್ಯಕತೆ ಇದೆ ಎಂದು ಸಿಡ್ನಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ. 

ಗುಣತಿಲಕ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವುದರಿಂದ ಎಲ್ಲ ಮಾದರಿಯ ಪಂದ್ಯದಿಂದ ಗುಣತಿಲಕರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಮಾನತು ಮಾಡಿದೆ. ಸದ್ಯ ತನಿಖೆ ಮುಂದುವರಿದಿದ್ದು, ದನುಷ್ಕಾ ಗುಣತಿಲಕ ಸಿಡ್ನಿ ಪೊಲೀಸರ ಬಂಧನದಲ್ಲಿದ್ದಾರೆ . ಅಂದಹಾಗೆ ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article