-->
ಐದರ ಬಾಲಕಿಯ ಅತ್ಯಾಚಾರ ಎಸಗಿದ ಆರೋಪಿಗೆ ಐದು ಬಸ್ಕಿ ಹೊಡೆಯುವ ಶಿಕ್ಷೆ

ಐದರ ಬಾಲಕಿಯ ಅತ್ಯಾಚಾರ ಎಸಗಿದ ಆರೋಪಿಗೆ ಐದು ಬಸ್ಕಿ ಹೊಡೆಯುವ ಶಿಕ್ಷೆ

ಪಾಟ್ನಾ: ಐದರ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣದ ಆರೋಪಿಗೆ ನೆರೆದಿದ್ದ ಗ್ರಾಮಸ್ಥರ ಮುಂಭಾಗ ಐದು ಬಸ್ಕಿ ತೆಗೆಯುವ ಶಿಕ್ಷೆಯನ್ನು ನೀಡಿರುವ ವೀಡಿಯೊವೊಂದು ವೈರಲ್ ಆಗಿದೆ. ಈ ಘಟನೆ ಬಿಹಾರದ ನವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಆರೋಪಿ ಚಾಕೊಲೇಟ್ ಕೊಡುವುದಾಗಿ ಪುಸಲಾಯಿಸಿ ಬಾಲಕಿಯನ್ನು ತನ್ನ ಕೋಳಿ ಫಾರ್ಮ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದು ಸ್ಥಳೀಯರ ಗಮನಕ್ಕೆ ಬರುತ್ತಿದ್ದಂತೆ, ಆರೋಪಿಯನ್ನು ಗ್ರಾಪಂನ ಮುಂಭಾಗ ಹಾಜರುಪಡಿಸಲಾಗಿದೆ. ಅವನನ್ನು ಪೊಲೀಸರಿಗೆ ಒಪ್ಪಿಸುವುದು ಬೇಡವೆಂದು ನಿರ್ಧರಿಸಿದ ಪಂಚಾಯತ್ ನಾಯಕರು, ಅವನಿಗೆ ತಮ್ಮದೇ ಶಿಕ್ಷೆಯನ್ನು ನೀಡಲು ನಿರ್ಧರಿಸಿದ್ದಾರೆ.


ಆರೋಪಿ ಅತ್ಯಾಚಾರ ಮಾಡಿಲ್ಲ ಎಂದು ನಿರ್ಧರಿಸಿದ ಅವರು ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿರುವುದಕ್ಕಾಗಿ ಮಾತ್ರ ಶಿಕ್ಷಿಸಲಾಗಿದೆ. ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಯ ವಿಚಾರಣೆ ಮತ್ತು ಶಿಕ್ಷೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವಿಷಯವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಗಮನಕ್ಕೆ ತರಲಾಗಿದೆ.

ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಹಾಗೂ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಗೌರವ್ ಮಾಂಗ್ಲ ಹೇಳಿದ್ದಾರೆ. ಅಪರಾಧವನ್ನು ಮುಚ್ಚಿಹಾಕಲು ಯತ್ನಿಸಿದ ವ್ಯಕ್ತಿಗಳ ಬಗ್ಗೆಯು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article