-->
 ಸಹಾನುಭೂತಿ ಪ್ರತಿಯೊಬ್ಬರೂ ಹೊಂದಿರಬೇಕಾದ ಸದ್ಗುಣ: ಡಾ ಜಿ ರಾಬರ್ಟ ಕ್ಲೈವ್

ಸಹಾನುಭೂತಿ ಪ್ರತಿಯೊಬ್ಬರೂ ಹೊಂದಿರಬೇಕಾದ ಸದ್ಗುಣ: ಡಾ ಜಿ ರಾಬರ್ಟ ಕ್ಲೈವ್

 




ಮೂಡುಬಿದಿರೆ: ನಮ್ಮ ಪ್ರತಿ ನಿತ್ಯದ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಜೀವನ ಕೌಶಲ್ಯಗಳು ಸಹಕಾರಿ ಎಂದು ಚಾಂತಾರು ಕ್ರಾಸಲ್ಯಾಂಡ್ ಕಾಲೇಜಿನ ಉಪಪ್ರಾಂಶುಪಾಲ ಡಾ ಜಿ ರಾಬರ್ಟ ಕ್ಲೈವ್ ತಿಳಿಸಿದರು.

ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗ ಆಯೋಜಿಸಿದ್ದ ಒಂದು ದಿನದ ‘ಜೀವನ ಕೌಶಲ್ಯಗಳ’ ಕುರಿತ ಕರ‍್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು. 




ಸವಾಲಿನ ಸಂಧರ್ಭವನ್ನು ಎದುರಿಸಿ ಗೆಲ್ಲಿ

ಈ ಕೌಶಲ್ಯಗಳು ಒಬ್ಬ ವ್ಯಕ್ತಿ ತೃಪ್ತಿಕರವಾಗಿ ಜೀವನವನ್ನು ನಡೆಸಲು ಆತ್ಮವಿಶ್ವಾಸ ಮತ್ತು ಪ್ರೇರಣೆಯನ್ನು ನೀಡುತ್ತವೆ. ನೇರ ಅನುಭವದಿಂದ ಅಥವಾ ಬೋಧನೆಯ ಮೂಲಕ ಹಾಗೂ ಜೀವನದಲ್ಲಿನ ಸವಾಲಿನ ಸಂದರ್ಭಗಳನ್ನು ಎದುರಿಸುವ ಮೂಲಕ ಈ ಕೌಶಲ್ಯಗಳನ್ನು ಪಡೆಯಬಹುದು ಎಂದರು. 

ನ್ಯೂನತೆಯನ್ನು ಜಯಿಸಲು ಸಹಕಾರಿ

ಗುರಿಗಳನ್ನು ಸಾಧಿಸಲು ಅಡ್ಡಿಪಡಿಸುವ ನ್ಯೂನತೆಗಳನ್ನು ಜಯಿಸಲು ಜೀವನ ಕೌಶಲ್ಯಗಳು ಸಹಕಾರಿ.  ಈ ಕೌಶಲ್ಯಗಳು ನಮ್ಮನ್ನು ನಾವು ಒಪ್ಪಿಕೊಳ್ಳಲು ಮತ್ತು ಸಂತೋಷದಿಂದ ಜೀವನವನ್ನು ನಡೆಸಲು  ಪ್ರೇರೆಪಿಸುತ್ತವೆ. ಆಲೋಚನಾ ಕೌಶಲ್ಯಗಳು, ಸ್ವಯಂ ಅರಿವು, ಸಮಸ್ಯೆ ಪರಿಹರಿಸುವ ವಿಮರ್ಶಾತ್ಮಕ ಚಿಂತನೆ, ಸೃಜನಾತ್ಮಕ ಚಿಂತನೆ, ಮತ್ತು ತೀರ್ಮಾನ ಮಾಡುವಿಕೆಯಂತಹ ಜೀವನ ಕುಶಲತೆಗಳು ಬದುಕನ್ನು ಸುಂದರವಾಗಿಡುತ್ತವೆ. ಸಹಾನುಭೂತಿ ಎಲ್ಲಾ ನೆಲೆಯಲ್ಲಿಯೂ ಶ್ರೇಷ್ಠವಾದುದ್ದು, ಹಾಗೂ ಪ್ರತಿಯೊಬ್ಬರೂ ಹೊಂದಿರಬೇಕಾದ ಸದ್ಗುಣ ಎಂದರು. 

ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳ ಮೂಲಕ ಜೀವನ ಕೌಶಲ್ಯದ ಪಾಠವನ್ನು ಮನದಟ್ಟು ಮಾಡಿದರು. 

ಕರ‍್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಮ್ಯಾನೇಜ್ಮೆಂಟ್ ವಿಭಾಗದ ಡೀನ್ ಸುರೇಖಾ, ಕರ‍್ಯಕ್ರಮ ಸಂಯೋಜಕಿ ಅಂಬಿಕಾ ಕೆ, ವಿದ್ಯಾರ್ಥಿಗಳಾದ ಸ್ಮಿತಾ ಹಾಗೂ ಪ್ರಜ್ವಲ ಉಪಸ್ಥಿತರಿದ್ದರು. 

ಕರ‍್ಯಕ್ರಮವನ್ನು ರಾಹುಲ್ ಎಸ್.ಎ ನಿರೂಪಿಸಿ, ಪ್ರೀತಮ್ ಎಚ್. ಆರ್ ವಂದಿಸಿದರು. 


Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article